ಮಿತ್ರರೆ,
ಒಬ್ಬರು ಸುಗಮವಾಗಿ ಸುಂದರವಾಗಿ ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದರೆ ಅದನ್ನು ಕೇಳಲೂ ಸೊಗಸಾಗಿರುತ್ತದೆ (ಬಿಸಿಯಾದ ಇಡ್ಲಿಗೆ ಖಾರ ಚಟ್ನಿ ಮುಟ್ಟಿಸಿ ತಿಂದ ಹಾಗೆ!) ನೀವೂ ಹಾಗೆ ಮಾತನಾಡಬೇಕೆಂದು ಬಯಸುತ್ತೀರಾದರೆ ಮೊದಲಿಗೆ ನೀವು ತಿಳಿದುಕೊಂಡಿರಲೇ ಬೇಕಾದ ಮೂಲತತ್ತ್ವಗಳಿವೆ. ಸ್ವಲ್ಪ ಚೊರೆ / boring ಅನಿಸಿದರೂ ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನೀವು 25% ಇಂಗ್ಲೀಷ್ ಕಲಿತಹಾಗೆ !
ARTICLES (ಆರ್ಟಿಕಲ್ಸ್) ಉಪ ಪದಗಳು
1. (Indefinite Articles) ಅನಿರ್ದಿಷ್ಟ ಉಪ ಪದ – a (ಎ), an (ಆ್ಯನ್) :
ಸಾಮಾನ್ಯವಾಗಿ ನಾಮಪದಗಳ ಮೊದಲು ಒಂದು ಹಾಗೂ ಒಬ್ಬ ಎಂಬ ಪದಗಳಿಗಾಗಿ (One ನ ಬದಲಿಗೆ) ‘a / an’ ನ್ನು ಬಳಸಲಾಗುತ್ತದೆ.
ಉದಾ :
ಒಬ್ಬ ಹುಡುಗ = a boy | ಒಂದು ಮನೆ = a house |
---|---|
ಒಬ್ಬ ಹುಡುಗಿ = a girl | ಒಂದು ಪೆನ್ = a pen |
ಅಂದರೆ ಯಾವುದಾದರೊಂದು ವಸ್ತು/ವ್ಯಕ್ತಿಯ ಬಗ್ಗೆ ಹೇಳುವಾಗ ಮೊದಲಿನ ವಾಕ್ಯದಲ್ಲಿ a ಬಳಸಬೇಕು, ಆದರೆ ನಿಮ್ಮನ್ನು ಯಾರಾದರೂ ಒಂದು ವಸ್ತು ಎಷ್ಟು ಬೇಕು ಎಂದು ಕೇಳಿದಾಗ ಒಂದು ಎನ್ನಲು a ಯ ಬದಲಿಗೆ one ನ್ನು ಬಳಸಿ.
ಉದಾ:
How many pens do you want? I want a pen > I want one pen. |
---|
1. ಒಂದು ಇಂಗ್ಲೀಷ್ ನಾಮಪದವು consonant (ಕಾನ್ಸೊನೆಂಟ್/ ವ್ಯಂಜನ) ನಿಂದ ಅಥವಾ ಅದನ್ನು ಪ್ರತಿನಿಧಿಸುವ ಅಕ್ಷರದಿಂದ ಆರಂಭವಾಗಿದ್ದರೆ ಅಲ್ಲಿ ‘a’ ಯನ್ನು ಬಳಸಲಾಗುತ್ತದೆ.
ಉದಾ:
ಒಂದು ಮರ = a tree | ಒಂದು ಪುಸ್ತಕ = a book | ಒಂದು ಹೃದಯ = a heart (ಹಾರ್ಟ್) |
---|
2. ಒಂದು ಇಂಗ್ಲೀಷ್ ನಾಮಪದವು ‘ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಔ, ಅಂ’ ಸ್ವರಗಳಿಂದ ಆರಂಭವಾಗಿದ್ದರೆ ಅದನ್ನು ಒಂದು/ ಒಬ್ಬ ಎಂದು ಹೇಳಲು ‘an’ನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ vowel (ಸ್ವರಾಕ್ಷರ)ಗಳಾದ A, E,I, O, U ಗಳಿಂದ ಇಂತಹಾ ಶಬ್ದಗಳು ಆರಂಭಗೊಂಡಿರುತ್ತವೆ.
ಉದಾ:
ಒಂದು ಛತ್ರಿ = an umbrella | ಒಬ್ಬ ಮುದುಕ = an old man |
---|---|
ಒಬ್ಬ ಕಲಾವಿದ = an artist | ಒಂದು ಯಂತ್ರ = an engine |
ಒಬ್ಬ ಭಾರತೀಯ = an Indian | ಒಂದು ಕಿತ್ತಳೆ ಹಣ್ಣು = an orange |
(ಮುಂದುವರೆಯುವುದು)