ಪ್ರಿಯ ಮಿತ್ರರೆ,
ಗಮನಿಸಿ, ಇಂಗ್ಲೀಷ್ ಶಬ್ದಗಳ ಉಚ್ಛಾರಣೆಯನ್ನು ಮಾತ್ರ ತೆಗೆದುಕೊಂಡರೆ ಸುಮಾರು 20 ಸ್ವರಗಳನ್ನು ಕೇಳಬಹುದು. ಆದರೆ ಈ ಸ್ವರಗಳಲ್ಲಿ ಹೆಚ್ಚಿನವುಗಳು A, E, I, O, U ಗಳಿಂದ ಆರಂಭವಾಗುತ್ತವಾದ್ದರಿಂದ ಇವುಗಳನ್ನು ಮಾತ್ರ ಸ್ವರಾಕ್ಷರಗಳೆಂದು ತಿಳಿಯಲಾಗಿದೆ. ಇದಕ್ಕೆ ಅಪವಾದವಾಗಿರುವ ಅಂಶಗಳೆಂದರೆ:
i.Vowel ನಿಂದ ಶಬ್ದ ಆರಂಭವಾಗಿದ್ದರೂ ಉಚ್ಛಾರದಲ್ಲಿ consonant ನ ಧ್ವನಿ ಕೇಳಿ ಬಂದರೆ ಅಲ್ಲಿ a’ಯನ್ನೇ ಬಳಸಬೇಕು.
ಉದಾ:
a university (ಯೂನಿವರ್ಸಿಟಿ), a European (ಯೂರೋಪಿಯನ್), a useful tip(ಯೂಸ್‍ಫುಲ್ ಟಿಪ್) ಇತ್ಯಾದಿ.
ii. ಕೆಲವು ಸ್ವರಗಳನ್ನು H, Y ಮೊದಲಾದ consonant ಗಳೂ ಪ್ರತಿನಿಧಿಸುತ್ತವೆ. ಹೀಗೆ ಒಂದು ಪದದ ಆರಂಭದಲ್ಲಿ consonant ಇದ್ದರೂ ಕೂಡಾ ಅದರ ಉಚ್ಛಾರ ಸ್ವರಾಕ್ಷರದಿಂದ ಆದಂತಿದ್ದರೆ ಅಲ್ಲಿ an ನ್ನು ಬಳಸಬೇಕು.
ಉದಾ:
an hour (ಅವರ್), an honest worker (ಆನೆಸ್ಟ್), a year (ಯೀಯರ್) etc.
iii. ಒಂದು ವೇಳೆ ನಾಮಪದವು ಸಂಕ್ಷೇಪಾಕ್ಷರದಲ್ಲಿದ್ದರೆ (abbreviation) ಮೊತ್ತ ಮೊದಲ ಅಕ್ಷರದ ಉಚ್ಚಾರಣೆಯ ಆಧಾರದಲ್ಲಿ a / an’ನ್ನು ಬಳಸಬೇಕು.
ಉದಾ:
a UFO, a TTK product, a VIP etc.
an L&T product, an ITC hotel, an MLA etc.
2. (Definite Article) ನಿರ್ದಿಷ್ಟ ಉಪಪದ – the (ದಿ/ದ) :
ನಮಗೆ ನಿರ್ದಿಷ್ಟವಾಗಿ ತಿಳಿದಿರುವ/ ಗೊತ್ತಿರುವ ಒಂದು ನಾಮಪದದ ಬಗ್ಗೆ ಹೇಳುವಾಗ (ವ್ಯಕ್ತಿ / ಜಾಗದ ಹೆಸರನ್ನು ಹೊರತುಪಡಿಸಿ) the’ವನ್ನು ಬಳಸಲಾಗುತ್ತದೆ.
ಉದಾ:
ಒಂದು ಪುಸ್ತಕ = a book (ಯಾವುದೋ ಒಂದು ಪುಸ್ತಕ ಎಂದರ್ಥ),
ಒಂದು ಕಿತ್ತಳೆ = an orange (ಯಾವುದೋ ಒಂದು ಕಿತ್ತಳೆ ಎಂದರ್ಥ)
ಆದರೆ ನಮಗೆ ತಿಳಿದಿರುವ ನಿರ್ದಿಷ್ಟವಾದ ಪುಸ್ತಕ/ಕಿತ್ತಳೆ ಬಗ್ಗೆ ಹೇಳುವಾಗ the book / the orange ಎನ್ನಲಾಗುತ್ತದೆ. (ಆದರೆ ನಮಗೆ ಒಬ್ಬ ವ್ಯಕ್ತಿ / ಜಾಗ/ ಊರು ಚಿರಪರಿಚಿತವಾಗಿದ್ದರೂ ಅವರ/ಅದರ ಹೆಸರಿನ ಮೊದಲಿಗೆ the ಸೇರಿಸಿ ಹೇಳುವುದು ತಪ್ಪು. (the Rama / the Mysore ಎಂದು ಹೇಳುವುದು ತಪ್ಪು.)
(ಮುಂದುವರೆಯುವುದು)