Site icon Pracharya.in

#03 – Parts Of Speech / ಸಂಭಾಷಣೆಯ ಭಾಗಗಳು

blog post 03

ಇಂದಿನಿಂದ ‘ಸಂಭಾಷಣೆಯ ಭಾಗಗಳು /  Parts of speech ಬಗ್ಗೆ ತಿಳಿಯೋಣ.
1. NOUN (ನೌನ್) ನಾಮಪದ : “ನಾಮಪದವೆಂದರೆ ಒಬ್ಬ ವ್ಯಕ್ತಿಯ, ಒಂದು ವಸ್ತುವಿನ, ಒಂದು ಜಾಗ/ ಪ್ರದೇಶದ, ಸಮೂಹದ ಹಾಗೂ ವಿಷಯದ ಹೆಸರನ್ನು ಸೂಚಿಸುವ ಶಬ್ದಗಳು’.

ಉದಾ:

Rama, book, people, friendship, Rajani, crowd, army, student,
Delhi, Mysore, village, town, doctor, engineer etc.

II. PRONOUN (ಪ್ರೋನೌನ್) ಸರ್ವನಾಮ :
‘ಒಂದು ನಾಮಪದವು ಪುನಃ ಪುನಃ ಬಳಕೆಯಾಗುವುದನ್ನು ತಪ್ಪಿಸಲು ಇರುವ ಶಬ್ದವೇ ಸರ್ವನಾಮ. ಉದಾ: ರಾಜು ಬಂದನು, ರಾಜು ಕುಳಿತನು, ರಾಜು ಕಾಫಿ ಕುಡಿದನು- ಹೀಗೆ ಪ್ರತೀ ವಾಕ್ಯದಲ್ಲಿ ನಾಮಪದ ‘ರಾಜು’ವನ್ನು ಬಳಸುವ ಬದಲು ಮೊದಲಿಗೆ ರಾಜು ಬಂದನು ಎಂದು ಹೇಳಿ ನಂತರ ಅವನು ಕುಳಿತನು, ಅವನು ಕಾಫಿ ಕುಡಿದನು – ಎಂದು ಹೇಳುತ್ತೇವಲ್ಲವೆ? ‘ರಾಜು’ ಬದಲಿಗೆ ಬಳಸಲಾದ ‘ಅವನು’ ಶಬ್ದವೇ ರಾಜು ಪದದ ಸರ್ವನಾಮ. ಇಂಗ್ಲೀಷ್‍ನ ಸರ್ವನಾಮಗಳು ಈ ಕೆಳಗಿನಂತಿವೆ.

I, me (ಐ, ಮಿ) ನಾನು
my (ಮೈ) ನನ್ನ
mine (ಮೈನ್) ನನ್ನದು
myself (ಮೈಸೆಲ್ಪ್) ನಾನೇ
You (ಯೂ) ನೀನು/ ನೀವು
your (ಯುವರ್) ನಿನ್ನ/ ನಿಮ್ಮ
yours (ಯುವರ್ಸ್) ನಿನ್ನದು/ ನಿಮ್ಮದು
yourself (ಯುವರ್ಸೆಲ್ಫ್) ನೀನೇ/ ನೀವೇ
We, us (ವಿ, ಅಸ್) ನಾವು
our (ಅವರ್) ನಮ್ಮ
ours (ಅವರ್ಸ್) ನಮ್ಮದು
ourselves (ಅವರ್‍ಸೆಲ್ವ್‍ಸ್) ನಾವೇ
They, them (ದೆ, ದೆಮ್) ಅವರು/ ಇವರು/ ಅವುಗಳು/ ಇವುಗಳು
their (ದೆಯರ್) ಅವರ/ ಅವುಗಳ
theirs (ದೆಯರ್ಸ್) ಅವರದ್ದು/ ಅವುಗಳದ್ದು
themselves (ದೆಮ್‍ಸೆಲ್ವ್‍ಸ್) ಅವರೇ/ ಅವುಗಳೇ
He, him (ಹಿ, ಹಿಮ್) ಅವನು/ ಇವನು
his (ಹಿಸ್) ಅವನ/ ಇವನ/ ಅವನದ್ದು/ ಇವನದ್ದು
himself (ಹಿಮ್‍ಸೆಲ್ಫ್) ಅವನೇ/ ಇವನೇ
She, her (ಶಿ, ಹರ್) ಅವಳು/ ಇವಳು
her (ಹರ್) ಅವಳ/ ಇವಳ
hers (ಹರ್ಸ್) ಅವಳದ್ದು
herself (ಹರ್‍ಸೆಲ್ಫ್) ಅವಳೇ
It (ಇಟ್) ಅದು/ ಇದು
its (ಇಟ್ಸ್) ಅದರ
itself ಇಟ್‍ಸೆಲ್ಫ್ ಅದೇ/ ಇದೇ
this (ದಿಸ್) ಇದು, ಈ
that (ದ್ಯಾಟ್) ಅದು, ಆ
these (ದೀಸ್) ಇವುಗಳು, ಈ
those (ದೋಸ್) ಅವುಗಳು, ಆ

(ಮುಂದುವರೆಯುವುದು)

Exit mobile version