#05 – VERBS / ಕ್ರಿಯಾಪದಗಳು
ಮಿತ್ರರೆ,
3. VERBS (ಕ್ರಿಯಾಪದಗಳು): ಕ್ರಿಯಾಪದಗಳೆಂದರೆ ಕ್ರಿಯೆಯನ್ನು ಸೂಚಿಸುವ ಶಬ್ದಗಳು. ಇದರಲ್ಲಿ 2 ವಿಧಗಳು.
1. Irregular Verbs :
ವರ್ತಮಾನಕಾಲ (Present Tense) ದಿಂದ ಭೂತಕಾಲ (Past Tense) ಹಾಗೂ ಭೂತಕೃದ್ವಾಚಕ (Past Participle)ವಾಗಿ ಬದಲಾಗುವಾಗ ಮೂಲರೂಪದಿಂದಲೇ ಬದಲಾಗುತ್ತವೆ.
ಉದಾಹರಣೆಗಳು :
ಒಡೆ/ಮುರಿಯು | break (ಬ್ರೇಕ್) | broke (ಬ್ರೋಕ್) | broken (ಬ್ರೋಕನ್) |
ಸುಡು/ಸುಟ್ಟುಹಾಕು | burn (ಬರ್ನ್) | burnt (ಬನ್ರ್ಟ್) | burnt (ಬನ್ರ್ಟ್) |
ಕಚ್ಚು | bite (ಬೈಟ್) | bit (ಬಿಟ್) | bitten (ಬಿಟ್) |
ಕಟ್ಟು ಹಾಕು | bind (ಬೈಂಡ್) | bound (ಬೌಂಡ್) | bound (ಬೌಂಡ್) |
ಸಹಿಸು | bear (ಬೇರ್) | bore (ಬೋರ್) | borne (ಬೋರ್ನ್) |
ಆರಂಭಿಸು | begin (ಬಿಗಿನ್) | began (ಬಿಗ್ಯಾನ್) | begun (ಬಿಗನ್) |
ಬಗ್ಗು, ಬಗ್ಗಿಸು | bend (ಬೆಂಡ್) | bent (ಬೆಂಟ್) | bent (ಬೆಂಟ್) |
ಕೊಂಡುಕೊಳ್ಳು | buy (ಬೈ) | bought (ಬಾಟ್) | bought (ಬಾಟ್) |
ತಾ, ತಗೊಂಡು ಬಾ | bring (ಬ್ರಿಂಗ್) | brought (ಬ್ರಾಟ್) | brought (ಬ್ರಾಟ್) |
ಕರೆದುಕೊಂಡು ಬಾ,
ಬಾ, ಬರು |
come (ಕಮ್) | came (ಕೇಮ್) | come (ಕೇಮ್) |
ಹಿಡಿ | catch (ಕ್ಯಾಚ್) | caught (ಕಾಟ್) | caught (ಕಾಟ್) |
ಕತ್ತರಿಸು | cut (ಕಟ್) | cut (ಕಟ್) | cut (ಕಟ್) |
2. Regular Verbs:
ವರ್ತಮಾನ ಕಾಲ (Present Tense)ದಿಂದ ಭೂತಕಾಲ (Past Tense) ಹಾಗೂ ಭೂತಕೃದ್ವಾಚಕ (Past Participle) ವಾಗಿ ಕೇವಲ ed’ ಸೇರಿಸುವುದರಿಂದ ಬದಲಾಗುತ್ತವೆ.
ಉದಾಹರಣೆಗಳು :
ಪ್ರಶ್ನಿಸು/ಕೇಳು | ask (ಆಸ್ಕ್) | asked (ಆಸ್ಕ್ಡ್) | asked |
ದೂಷಿಸು/ದೂರು | blame (ಬ್ಲೇಮ್) | blamed (ಬ್ಲೇಮ್ಡ್) | blamed |
ಚರ್ಚೆ ಮಾಡು | bargain (ಬಾರ್ಗೇನ್) | bargained (ಬಾರ್ಗೇನ್ಡ್) | bargained |
ಕರೆಯು | call (ಕಾಲ್) | called (ಕಾಲ್ಡ್) | called |
ಬದಲಿಸು | change (ಚೇಂಜ್) | changed (ಚೇಂಜ್ಡ್) | changed |
ನರ್ತಿಸು | dance (ಡ್ಯಾನ್ಸ್) | danced (ಡ್ಯಾನ್ಡ್ಡ್) | danced |
ಈ ಕ್ರಿಯಾಪದಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಮೊತ್ತ ಮೊದಲಿಗೆ ಕ್ರಿಯಾಪದಗಳು present, past, past participle
ಎಂಬ ಮೂರು ಕಾಲದಲ್ಲಿರುತ್ತವೆ ಆದರೆ ವರ್ತಮಾನ, ಭೂತಕಾಲ ಹಾಗೂ ಭೂತಕೃದ್ವಾಚಕ ಎಂದಾಗಿದೆ, ಭೂತಕೃದ್ವಾಚಕ ಎಂದರೆ ಭವಿಷ್ಯತ್ ಕಾಲ ಅಲ್ಲವೇ ಅಲ್ಲ, ಭೂತಕಾಲದ ಇನ್ನೊಂದು ರೂಪ. ಇದನ್ನು ಹೀಗೆ ಅರ್ಥ ಮಾಡಿಕೊಳ್ಳಿ.
ನಿಮ್ಮ ಎದುರಿಗೆ ರಾಮ, ರವಿ ಹಾಗೂ ರಘು ಎಂಬ ಮೂವರು ಸ್ನೇಹಿತರಿದ್ದಾರೆ ಹಾಗೂ ಅವರ ಎದುರಿಗೆ ಒಂದು ಬಾಳೆಹಣ್ಣು ಇದೆ ಎಂದುಕೊಳ್ಳಿ.
ಮೊದಲಿಗೆ ರಾಮ ರವಿಗೆ ಹೇಳುತ್ತಾನೆ : ನೀನು ಬಾಳೆಹಣ್ಣು ತಿನ್ನು You eat banana.
ಈಗ ವರ್ತಮಾನ ಕಾಲ. ಆದುದರಿಂದ ರಾಮನು present tense/ವರ್ತಮಾನ ಕಾಲದಲ್ಲರುವ, ‘ತಿನ್ನು’ ಎಂಬರ್ಥ ಕೊಡುವ ಕ್ರಿಯಾಪದ eat ನ್ನು ಬಳಸಿ ರವಿಗೆ ಹೇಳುತ್ತಾನೆ ಎಂದರ್ಥ ಮಾಡಿಕೊಳ್ಳಿ.
ರಾಮ ಹೇಳಿದಂತೆ ರವಿಯು ಬಾಳೆಹಣ್ಣನ್ನು ತಿಂದನು ಎಂದುಕೊಳ್ಳಿ. ಅಂದರೆ ಕ್ರಿಯೆ ಮುಗಿದಿದೆ ತಾನೆ? ಅದಕ್ಕಾಗಿ ಅವನು ಹೇಳುತ್ತಾನೆ,
ನಾನು ಬಾಳೆಹಣ್ಣು ತಿಂದೆನು. = I ate banana.
ಮೇಲಿನ ವಾಕ್ಯದಲ್ಲಿ ಬಳಕೆಯಾದ ate, ವರ್ತಮಾನ ಕಾಲದ ಕ್ರಿಯಾಪದ eat ನ past tense/ಭೂತಕಾಲದ ರೂಪ. ಹೌದೆ?
ಈಗ ಮೊದಲಿಗೆ ರಾಮ ರವಿಗೆ ಹೇಳಿದ್ದು ಹಾಗೂ ರವಿ ಬಾಳೆಹಣ್ಣು ತಿಂದು, ತಿಂದದ್ದು ರಘು ನೋಡಿದ್ದಾನೆಂದುಕೊಳ್ಳಿ. ಈಗ ಅವನು ಹೇಳುವ ವಾಕ್ಯ ಏನಿರಬಹುದು?
ಬಾಳೆಹಣ್ಣು ರವಿಯಿಂದ ತಿನ್ನಲ್ಪಟ್ಟಿತು. =Banana is eaten by Ravi.
ಇದು Passive voice ನ ವಾಕ್ಯ. ಇಂತಹ ವಾಕ್ಯಗಳಲ್ಲಿ ಯಾವತ್ತೂ /ಭೂತಕೃದ್ವಾಚಕ ಕಾಲದಲ್ಲಿನ ಕ್ರಿಯಾಪದಗಳೇ ಬಳಕೆಯಾಗುತ್ತವೆ. ಮೇಲಿನ ವಾಕ್ಯದಲ್ಲಿ ಬಳಕೆಯಾದ eaten, ಕ್ರಿಯಾಪದ eat ನ Past participle ಅಂದರೆ ಭೂತಕೃದ್ವಾಚಕ ರೂಪ. ಎಲ್ಲಾ ಕ್ರಿಯಾಪದಗಳನ್ನು ಈ ಮೇಲಿನಂತೆಯೇ ಅರ್ಥ ಮಾಡಿಕೊಳ್ಳಿ ಹಾಗೂ ಕ್ರಿಯಾಪದಗಳ ಪಟ್ಟಿಯನ್ನು ಕಂಠಪಾಠ ಮಾಡಿಕೊಳ್ಳಿ.
(ಮುಂದುವರೆಯುವುದು)
Tag:Verbs