Site icon Pracharya.in

#30 Am/Are Part 8

ಪ್ರಿಯರೆ,

ಇಂದು ಪ್ರಶ್ನಾರ್ಥಕಗಳಿರುವ ವಾಕ್ಯಗಳನ್ನು ರಚಿಸೋಣ.
You are = ನೀನು ಇದ್ದೀ. Are you? = ನೀನು ಇದ್ದೀಯಾ? ಎಂದೆಣಿಸಿಕೊಳ್ಳಿ.
ಈಗ ಇದರ ಮೊದಲು ಯಾರು ಪ್ರಶ್ನಾರ್ಥಕಕ್ಕಾಗಿ who ಸೇರಿಸಿ.
= Who are you? = ನೀನು/ನೀವು ಯಾರು?

You are doing > Are you doing? = ನೀವು ಮಾಡುತ್ತಿದ್ದೀರಾ?
ಇದರ ಮೊದಲು ಏನು ಪ್ರಶ್ನಾರ್ಥಕಕ್ಕಾಗಿ what ಸೇರಿಸಿ.
= What are you doing? = ನೀನು ಏನು ಮಾಡುತ್ತಿದ್ದೀ/ನೀವು ಏನು ಮಾಡುತ್ತಿದ್ದೀರಿ?
ಈ ಪ್ರಶ್ನೆಗೆ ಉತ್ತರವಾಗಿ ನೀವು ಯಾವ ಕೆಲಸವನ್ನು ಮಾಡುತ್ತಾ ಇದ್ದೀರೋ ಅದನ್ನು ಪ್ರತಿನಿಧಿಸುವ ಕ್ರಿಯಾಪದಕ್ಕೆ iಟಿg ಸೇರಿಸಿ ಹೇಳಬೇಕು. ಉದಾ: ನೀವು ಊಟ ಮಾಡುತ್ತಿದ್ದರೆ, – I am having lunch, ನೀವು ಆಡುತ್ತಿದ್ದರೆ, – I am playing.
ಗಮನಿಸಿ, I am doing meals / I am doing playing – ಹೀಗೆ ಹೇಳುವುದು ತಪ್ಪು.

ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.

  1. ನೀನು ಈಗ ಎಲ್ಲಿದ್ದೀ? = Where are you now?
  2. ನೀವು ಹೇಗಿದ್ದೀರಿ? = How are you?
  3. ಅವರು ಏಕೆ ಇಲ್ಲಿದ್ದಾರೆ? = Why are they here?
  4. ನಿನ್ನ ಗೆಳೆಯರು ಹೇಗಿದ್ದಾರೆ? = How are your friends?
  5. ಅಲ್ಲಿ ಎಷ್ಟು ಪುಸ್ತಕಗಳಿವೆ? = How many books are there?
  6. ನೀನು ಇಲ್ಲಿ ಎಷ್ಟು ದಿನಗಳಿದ್ದೀ? = How long are you here?/How many days are you here?
  7. ನೀನು ಎಲ್ಲಿಗೆ ಹೋಗುತ್ತಿದ್ದೀ? = Where are you going?
  8. ನೀನು ಏನು ತಿನ್ನುತ್ತಿದ್ದೀ? = What are you eating?
  9. ಅವರು ಅಲ್ಲಿ ಯಾಕೆ ಕುಳಿತುಕೊಂಡಿದ್ದಾರೆ? = Why are they sitting there?
  10. ಅವರು ಯಾರಿಗಾಗಿ ಕಾಯುತ್ತಿದ್ದಾರೆ? = Who are they waiting for?
  11. ನೀನೇಕೆ ಪ್ರತಿದಿನ ಓದುತ್ತಿಲ್ಲ? = Why are you not reading every day?
  12. ನೀನು ಯಾವ ದಿನಪತ್ರಿಕೆ ಓದುತ್ತಾ ಇದ್ದೀ? = Which newspaper are you reading?
  13. ನೀನೀಗ ಯಾರ ಜೊತೆ ಮಾತನಾಡುತ್ತಿದ್ದೀ? = With whom are you talking/Who are you talking to?
  14. ನಿನ್ನ ಪುಸ್ತಕಗಳು ಎಲ್ಲಿವೆ? = Where are your books?
  15. ನೀನೇಕೆ ಅಳುತ್ತಿದ್ದೀ? = Why are you crying?

ಸೂಚನೆ: ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನಿಮ್ಮದೇ ಆದ ಉತ್ತರ ಕೊಟ್ಟು ಅಭ್ಯಸಿಸಿ. ಉದಾ:
1. Where are you now? > I am at home now.
2. Why are they here? > They are here to learn English.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ:

  1. ಅವರ ಹೆಸರುಗಳೇನು?
  2. ಅಲ್ಲಿ ಯಾರೆಲ್ಲ ಇದ್ದಾರೆ?
  3. ಅವರು ಯಾರ ಸಂಬಂಧಿಕರು?
  4. ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀ?
  5. ನೀನೇಕೆ ದುಃಖದಲ್ಲಿದ್ದೀ?

(ಮುಂದುವರೆಯುವುದು)

Exit mobile version