Site icon Pracharya.in

#8 Adverbs / ಕ್ರಿಯಾವಿಶೇಷಣಗಳು

ಮಿತ್ರರೆ,

ಒಂದು ಕ್ರಿಯೆಯು ಎಲ್ಲಿ, ಹೇಗೆ ಮತ್ತು ಯಾವಾಗ ನಡೆಯಿತು ಎಂದು ತಿಳಿಸುವ ಶಬ್ದಗಳು ಕ್ರಿಯಾವಿಶೇಷಣಗಳು.
ಉದಾ: Bus is going slowly. = ಬಸ್ ನಿಧಾನವಾಗಿ ಹೋಗುತ್ತಿದೆ. ಈ ವಾಕ್ಯದಲ್ಲಿ -ನಿಧಾನವಾಗಿ- ಶಬ್ದವು ಬಸ್ ಹೇಗೆ ಹೋಗುತ್ತಿದೆಯೆಂದು ತಿಳಿಸುತ್ತದೆ. ಆದ್ದರಿಂದ -ನಿಧಾನವಾಗಿ/slowly- ಪದವು ಕ್ರಿಯಾವಿಶೇಷಣ.
ಇಂತಹಾÀ ಕ್ರಿಯಾವಿಶೇಷಣಗಳು: easlily (ಸುಲಭವಾಗಿ) very fast (ವೇಗವಾಗಿ) happily (ಸಂತೋಷದಿಂದ)
angrily (ಸಿಟ್ಟಿನಿಂದ) here (ಇಲ್ಲಿ) there (ಅಲ್ಲಿ) thus (ದಸ್=ಹೀಗೆ) then (ದೆನ್=ನಂತರ).

in the morning = ಬೆಳಿಗ್ಗೆ/ ಬೆಳಗ್ಗಿನ ಹೊತ್ತಿನಲ್ಲಿ
in the afternoon = ಮಧ್ಯಾಹ್ನ / ಮಧ್ಯಾಹ್ನದ ಹೊತ್ತಿನಲ್ಲಿ
in the evening = ಸಂಜೆ / ಸಂಜೆಯ ಹೊತ್ತಿನಲ್ಲಿ
at night = ರಾತ್ರಿ/ ರಾತ್ರಿಯ ಹೊತ್ತಿನಲ್ಲಿ

Preposition ನಂತೆಯೇ ಬಳಕೆಯಾಗುವ ಈ ಕೆಳಗಿನ ಕ್ರಿಯಾವಿಶೇಷಣಗಳ ಬಳಕೆಯನ್ನು ಅಭ್ಯಸಿಸಿ.
a. ABOUT (ಎಬೌಟ್) = ನ/ರ/ಯ/ದ/ಳ ಬಗ್ಗೆ/ಕುರಿತು, ಸುಮಾರು
ಉದಾ:
about Ravi = ರವಿಯ ಬಗ್ಗೆ/ಕುರಿತು
about 6’O’clock = ಸುಮಾರು 6 ಘಂಟೆಗೆ
about this book = ಈ ಪುಸ್ತಕದ ಬಗ್ಗೆ
about 1 KG. = ಸುಮಾರು ಒಂದು ಕಿಲೋ

b. OVER / ABOVE (ಓವರ್/ಎಬೋವ್) ನ/ರ/ಯ/ದ/ಳ ಮೇಲುಗಡೆ (ಮೇಲ್ಮೈಗೆ ತಾಗದಿರುವ)
ಉದಾ:
above the tree = ಮರದ ಮೇಲ್ಗಡೆ
over the house = ಮನೆಯ ಮೇಲುಗಡೆ
above the 3rd line = 3ನೇ ಸಾಲಿನ ಮೇಲುಗಡೆ
over the bridge = ಸೇತುವೆಯ ಮೇಲ್ಬಾಗದಲ್ಲಿ

c. WITHOUT (ವಿದೌಟ್) = ಇಲ್ಲದೇ
ಉದಾ:
without Raju = ರಾಜು ಇಲ್ಲದೆ
without money = ಹಣವಿಲ್ಲದೆ
without your help = ನಿಮ್ಮ ಸಹಾಯವಿಲ್ಲದೆ

d. BY (ಬೈ) = ಇಂದ ….ಲ್ಪಟ್ಟು
ಉದಾ:
caught by Sachin = ಸಚಿನ್‍ನಿಂದ ಹಿಡಿಯಲ್ಪಟ್ಟಿದೆ
written by Rama = ರಾಮನಿಂದ ಬರೆಯಲ್ಪಟ್ಟಿದೆ
sung by Geetha = ಗೀತಾಳಿಂದ ಹಾಢಲ್ಪಟ್ಟಿದೆ

e. BEFORE (ಬಿಫೋರ್) = ಮೊದಲು
ಉದಾ:
before 1’O’ clock = 1 ಘಂಟೆಯ ಮೊದಲು
before marriage = ಮದುವೆಯ ಮೊದಲು
before the speech = ಭಾಷಣದ ಮೊದಲಿಗೆ

f. AFTER (ಆಫ್ಟರ್) = ನಂತರ
ಉದಾ:
after an hour = ಒಂದು ಘಂಟೆಯ ನಂತರ
after the class =ತರಗತಿಯ ನಂತರ
after the function = ಸಮಾರಂಭದ ನಂತರ
after you = ನಿನ್ನ / ನಿಮ್ಮ ನಂತರ

g. IN FRONT OF (ಇನ್ ಫ್ರಂಟ್ ಆಫ್) ಎದುರಿಗೆ/ಎದುರಿನಲ್ಲಿ
ಉದಾ:
in front of our car = ನಮ್ಮ ಕಾರಿನ ಎದುರಿಗೆ
in front of that building = ಆ ಕಟ್ಟಡದ ಎದುರಿನಲ್ಲಿ
in front of me = ನನ್ನ ಎದುರಿಗೆ

h. BEHIND (ಬಿಹೈಂಡ್) = ಹಿಂದುಗಡೆ
ಉದಾ:
behind our house = ನಮ್ಮ ಮನೆಯ ಹಿಂದುಗಡೆ
behind you = ನಿನ್ನ ಹಿಂದೆ
behind that tree = ಆ ಮರದ ಹಿಂದೆ

Exit mobile version