ಪ್ರಿಯರೆ,
ಕಳೆದ ವಾರದ ಪ್ರಶ್ನೆಗಳಿಗೆ ಉತ್ತರ:
- 2 students are not coming to school.
- They are not doing any work there.
- We are not talking about him.
- We are not fighting, but practising Karate.
- They are not playing with us, but simply watching.
ಗಮನಿಸಿ, are you ನಿಂದ ಆರಂಭವಾದ ಪ್ರಶ್ನೆಗೆ ನೀವು ಒಬ್ಬರೇ ಉತ್ತರಿಸುವುದಾದರೆ Yes. I am …. ಅಥವಾ ಓo. No. I am not … ನಿಂದ ಆರಂಭಿಸಬೇಕು. ನಿಮ್ಮ ಜೊತೆ ಇತರರಿದ್ದರೆ We are.. / We are not …ನಿಂದ ಉತ್ತರಿಸಬೇಕು. ಉದಾ:
- ನೀನು ರಾಜುವೆ? Are you Raju?
ಹೌದು. ನಾನು ರಾಜು. Yes. I am Raju.
ಅಲ್ಲ. ನಾನು ರಾಜು ಅಲ್ಲ. ಓo. No. I am not Raju. - ನೀವು ವಿದ್ಯಾರ್ಥಿಗಳೆ? Are you students?
ಹೌದು. ನಾವು ವಿದ್ಯಾರ್ಥಿಗಳು. Yes. We are students.
ಅಲ್ಲ. ನಾವು ವಿದ್ಯಾರ್ಥಿಗಳಲ್ಲ. No. We are not students.
ನಕಾರಾತ್ಮಕ ವಾಕ್ಯಗಳನ್ನು ಪ್ರಶ್ನೆಯಾಗಿಸಲು aren’t + ಕರ್ತೃಪದ + ಕ್ರಿಯಾಪದ ಯಾ are ಮತ್ತು not ಮಧ್ಯೆ ಕರ್ತೃಪದ ಸೇರಿಸಿ ಹೇಳಬೇಕು. ಉದಾ:
= The students are not coming to class regularly.
> Are the students not coming to class regularly?
ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.
- ನೀನು ಅವರಿಗಾಗಿ ಕಾಯುತ್ತಿಲ್ಲವೆ? =Are you not waiting for them?
- ನಿನ್ನ ಗೆಳೆಯರು ಚೆನ್ನಾಗಿ ಆಡುತ್ತಿಲ್ಲವೆ? = Aren’t your friends playing well?
- ಫ್ಯಾನ್‍ಗಳು ವೇಗವಾಗಿ ತಿರುಗುತ್ತಿಲ್ಲವೆ? = Are the fans not running in full speed?
- ಅವರು ಮರಗಳನ್ನು ಕಡಿಯುತ್ತಿಲ್ಲವೆ? = Are they not cutting down the trees?
- ನಾವು ಅವನಿಗೆ ಸಂಬಳ ಕೊಡ್ತಾ ಇಲ್ವಾ? = Are we not giving salary to him?
- ನೀವು ಪುಸ್ತಕಗಳನ್ನು ಮಾರುತ್ತಿಲ್ಲವೆ? = Are you not selling books?
- ಈ ಹುಡುಗರು ಸರಿಯಾಗಿ ಕಲೀತಾ ಇಲ್ವಾ? = Aren’t these boys studying well?
- ನೀನು ಪ್ರತಿದಿನ ಪೇಪರ್ ಓದ್ತಾ ಇಲ್ವಾ? = Aren’t you reading newspapers every day?
- ನಾನು ಸರಿಯಾಗಿ ಕೆಲಸಮಾಡುತ್ತಿಲ್ಲವೆ? = Am I not working properly?
- ನೀನು ಅಡಿಗೆ ಮಾಡ್ತಾ ಇಲ್ವಾ? = Are you not cooking?
ಸೂಚನೆ: ಮೇಲಿನ ಎಲ್ಲಾ ಪ್ರಶ್ನೆಗಳಿಗೆ ನಿಮ್ಮದೇ ಆದ ಉತ್ತರ ಕೊಡಿ. ಉದಾ:
Are you not waiting for them?
Yes, I am waiting for them.
No, I am not waiting for them.
(ಮುಂದುವರೆಯುವುದು)