Site icon Pracharya.in

#25 Am/Are Part 3

ಪ್ರಿಯರೆ,

ಕಳೆದ ವಾರದ ಪ್ರಶ್ನೆಗಳಿಗೆ ಉತ್ತರಗಳು:

  1. I am thinking about her.
  2. I am searching my pen.
  3. They are going by bus.
  4. Crows are crowing.
  5. Buses are going very fast.

I am + noun/adj/adverb ನಿಂದಾದ ವಾಕ್ಯಗಳನ್ನು ಪ್ರಶ್ನಾಸೂಚಕವಾಗಿಸಲು ವಾಕ್ಯಗಳನ್ನು am ನಿಂದ ಆರಂಭಿಸಬೇಕು. ಉದಾ: I am right > Am I right? = ನಾನು ಸರಿಯೆ?
I am tall. > Am I tall? = ನಾನು ಉದ್ದ ಇದ್ದೇನೆಯೆ? (ಆದರೆ ಇಂತಹಾ ವಾಕ್ಯಗಳ ಬಳಕೆ ತುಂಬಾ ಕಡಿಮೆ).

ಇದೇ ರೀತಿ are ಬಳಸಿ ರಚಿಸಲಾದ ಸಕಾರಾತ್ಮಕ ವಾಕ್ಯಗಳನ್ನು ಪ್ರಶ್ನಾಸೂಚಕವಾಗಿಸಲು are ನ್ನು You/We/They ಗಳ
ಮೊದಲಿಗೆ ಹೇಳಬೇಕು. ಉದಾ:

  1. You are Raju.> Are you Raju? = ನೀನು ರಾಜುವೆ?
  2. They are ready.> Are they ready? = ನೀನು ತಯಾರಿದ್ದೀಯಾ/ನೀವು ತಯಾರಿದ್ದೀರಾ?
  3. Those are good.> Are those good? = ಅವುಗಳು ಚೆನ್ನಾಗಿವೆಯೆ?

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.

  1. ನೀನು ತಯಾರಿದ್ದೀಯಾ? = Are you ready?
  2. ನಾವು ತೊಂದರೆಯಲ್ಲಿದ್ದೇವೆಯೆ? = Are we in danger?
  3. ಅವರು ಈ ಕಾಲೇಜಿನ ವಿದ್ಯಾರ್ಥಿಗಳೆ? = Are they students of this college?
  4. ನೀವೀಗ ದೆಹಲಿಯಲ್ಲಿದ್ದೀರಾ? = Are you there in Delhi now?
  5. ಅವರು ಈಗ ನಿಮ್ಮ ಮನೆಯಲ್ಲಿದ್ದಾರಾ? = Are they in your house now?
  6. ನಿನಗೆ ನನ್ನ ಮೇಲೆ ಸಿಟ್ಟೇ? = Are you angry with me?
  7. ನಿನ್ನ ಗೆಳೆಯರು ಲೈಬ್ರರಿಯಲ್ಲಿದ್ದಾರೆಯೆ? = Are your friends there in the library?
  8. ಅವರು ನಿನ್ನ ಗೆಳೆಯರೆ? = Are they your friends?
  9. ಇವುಗಳು ಸಾಗುವಾನಿ ಮರಗಳೆ? = Are these teak wood trees?
  10. ಮಾವಿನಕಾಯಿಗಳು ಹಣ್ಣಾಗಿವೆಯೆ? = Are the mangoes ripe?

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ನೀನು ನನ್ನ ತಮ್ಮನ ಸಹಪಾಠಿಯೆ?
2. ಮಾವಿನ ಹಣ್ಣುಗಳು ಸಿಹಿಯಾಗಿವೆಯೆ?
3. ನಿನ್ನ ಗೆಳೆಯರಿಗೆ ಬಾಯಾರಿಕೆ ಆಗಿದೆಯೆ?
4. ನೀವು ಅವಳ ಜೊತೆ ಇದ್ದೀರಾ?
5. ನೀವೀಗ ಮನೆಯಲ್ಲಿದ್ದೀರಾ ಅಥವಾ ಆಫೀಸ್‍ನಲ್ಲಿದ್ದೀರಾ?

(ಮುಂದುವರೆಯುವುದು)

Exit mobile version