Site icon Pracharya.in

#27 Am/Are Part 5

ಪ್ರಿಯರೆ,
ಕಳೆದ ವಾರದ ಪ್ರಶ್ನೆಗಳ ಉತ್ತರ:
1. Are you working in this school?
2. Are you having/taking meals?
3. Are you coming tomorrow?
4. Are they telling truth?
5. Am I looking smart?

I AM NOT/ WE/YOU/THEY ARE NOT = ಇಲ್ಲ / ಅಲ್ಲ
I am not + noun/adjective/adverb ಅಥವಾ you/we/they are not + noun/adjective/adverb ನಿಂದ ನಕಾರಾತ್ಮಕ ವಾಕ್ಯಗಳನ್ನು ರಚಿಸಬಹುದು. ಈ ವಾಕ್ಯಗಳ ಕೊನೆಯ ಪದ ಅಲ್ಲ/ಇಲ್ಲ ಎಂದಿರುತ್ತದೆ. ಉದಾ:

  1. ನಾನು ರಾಜು ಅಲ್ಲ. = I am not Raju.
  2. ನಾನು ಅವನ ಗೆಳೆಯನಲ್ಲ. = I am not his friend.
  3. ನಾವು ಈ ಶಾಲೆಯ ವಿದ್ಯಾರ್ಥಿಗಳಲ್ಲ. = We are not the students of this school.
  4. ಅವರಿನ್ನೂ ತಯಾರಾಗಿಲ್ಲ. = They are not ready yet.
  5. ನಿನ್ನ ಪುಸ್ತಕಗಳು ಇಲ್ಲಿಲ್ಲ. = Your books are not here.

ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.

  1. ನಾನು ರಾಮರಾಯರ ಮಗನಲ್ಲ. = I am not the son of Mr Rama Rao.
  2. ನಾನು ಇಂಗ್ಲೀಷಿನಲ್ಲಿ ಅಷ್ಟೊಂದು ಚೆನ್ನಾಗಿಲ್ಲ. = I am not so good at English.
  3. ನನಗೆ ನಿನ್ನ ಮೇಲೆ ಸಿಟ್ಟಿಲ್ಲ. = I’m not angry with you.
  4. ನಾನು ಈಗ ಮನೆಯಲ್ಲಿಲ್ಲ. = I am not at home now.
  5. ನಾನು ನಿನ್ನ ಜೊತೆ ಬರಲು ತಯಾರಿಲ್ಲ. = I am not ready to come with you.
  6. ಅವರೀಗ ಅವರ ಹಳೆಯ ಮನೆಯಲ್ಲಿಲ್ಲ. = They are not in their old house now.
  7. ನನ್ನ ಗೆಳೆಯರು ಶ್ರೀಮಂತರಲ್ಲ. = My friends are not rich.
  8. ನಾವು ಈ ಸಂಸ್ಥೆಯ ಕಾರ್ಮಿಕರಲ್ಲ. = We are not the workers of this company.
  9. ಆ ಪುಸ್ತಕಗಳು ನನ್ನ ಚೀಲದಲ್ಲಿಲ್ಲ. = Those books are not in my bag.
  10. ಅವರು ನಮ್ಮ ಜೊತೆಯಲ್ಲಿಲ್ಲ. = They are not with us.

(ಮುಂದುವರೆಯುವುದು)

Exit mobile version