Site icon Pracharya.in

#23 Am/Are Part 1

Am, I ಯೊಡನೆ ವರ್ತಮಾನಕಾಲದ ವಾಕ್ಯಗಳಲ್ಲಿ ಬಳಸಲಾಗುವ ಸಹಾಯಕ ಕ್ರಿಯಾಪದ. ವರ್ತಮಾನ ಕಾಲದಲ್ಲಿ ನಾನು ಯಾರು, ಏನು, ಎಲ್ಲಿ ಮತ್ತು ಹೇಗೆ ಇದ್ದೇನೆ ಎಂದು ಹೇಳಲು I am ಗೆ ನಾಮಪದ/ ನಾಮಶೇಷಣ/ಕ್ರಿಯಾವಿಶೇಷಣಗಳನ್ನು ಸೇರಿಸಬೇಕು. ಇವುಗಳು Simple Present tense ನ ವಾಕ್ಯಗಳು ಉದಾ:

  1. I am Raju. = ನಾನು ರಾಜು.
  2. I am tall. = ನಾನು ಉದ್ದ(ವಾಗಿ) ಇದ್ದೇನೆ.

am ನ್ನು I ಜೊತೆ ಸೇರಿಸಿದಂತೆ You, We, They ಗಳ ನಂತರ are ಮತ್ತು ನಾಮಪದ/ವಿಶೇಷಣಗಳನ್ನು ಸೇರಿಸಿದರೆ, ಕರ್ತೃಪದಕ್ಕೆ ಅನುಗುಣವಾಗಿ ..ಇದ್ದೀ, ..ಇದ್ದೇವೆ ಹಾಗೂ ..ಇದ್ದಾರೆ/ಇವೆ ಎಂಬ ಮುಕ್ತಾಯದ ಪ್ರತ್ಯಯವಿರುವ ವಾಕ್ಯಗಳನ್ನು ರಚಿಸಬಹುದು. ಈ ವಾಕ್ಯಗಳು ವರ್ತಮಾನ ಕಾಲದಲ್ಲಿ ನೀನು/ನೀವು, ನಾವು ಮತ್ತು ಅವರು/ಅವುಗಳು ಯಾರು, ಏನು, ಎಲ್ಲಿ ಮತ್ತು ಹೇಗೆ ಇರುವರೆಂದು ತಿಳಿಸುತ್ತವೆ. ಉದಾ:

  1. You are Raju.. = ನೀನು ರಾಜು.
  2. We are students. = ನಾವು ವಿದ್ಯಾರ್ಥಿಗಳು.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.

  1. ನಾನು ರಾಮರಾಯರ ಎರಡನೆಯ ಮಗ. = I am the second son of Mr. Rama Rao.
  2. ನಾನು ಈಗ ಮನೆಯಲ್ಲಿದ್ದೇನೆ. = I am at home now.
  3. ನಾನು ಈ ಕಾಲೇಜಿನ ವಿದ್ಯಾರ್ಥಿ. = I am a student of this college.
  4. ನನಗೆ ತುಂಬಾ ಹಸಿವಾಗಿದೆ. = I am very hungry.
  5. ನೀನು ಈ ತರಗತಿಯ ಮುಖಂಡ. = You are the leader of this class.
  6. ನಾವು ಈ ಕಾಲೇಜಿನ ಹಳೆವಿದ್ಯಾರ್ಥಿಗಳು. = We are old students of this college.
  7. ನಮಗೆ ನಿಮ್ಮ ಮೇಲೆ ಸಿಟ್ಟು ಬಂದಿದೆ. = We are angry with you.
  8. ಅವರು ನನ್ನ ಸಹಪಾಠಿಗಳು. = They are my classmates.
  9. ಅವರು ಹೊರಡಲು ತಯಾರಾಗಿದ್ದಾರೆ. = They are ready to leave now.
  10. ನಾವು ಹುಬ್ಬಳ್ಳಿಯವರು. = We are from Hubballi.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ:
1. ನಾವೀಗ ದೇವಸ್ಥಾನದಲ್ಲಿದ್ದೇವೆ.
2. ಪುಸ್ತಕಗಳು ನನ್ನ ಚೀಲದಲ್ಲಿವೆ.
3. ಅವರು ತುಂಬಾ ಶ್ರೀಮಂತರು.
4. ಈ ಹಣ್ಣುಗಳು ಚೆನ್ನಾಗಿವೆ.
5. ಅವರು ನನ್ನ ಜೊತೆ ಇದ್ದಾರೆ.

(ಮುಂದುವರೆಯುವುದು)

Exit mobile version