Site icon Pracharya.in

#24 Am/Are Part 2

ಪ್ರಿಯರೆ,
ಕಳೆದ ವಾರದ ಪ್ರಶ್ನೆಗಳಿಗೆ ಉತ್ತರ:

  1. We are in the temple now.
  2. Books are in my bag.
  3. They are very rich.
  4. These fruits are good.
  5. They are with me.

‘ing’ ಒಂದು ವರ್ತಮಾನಕಾಲದ ಕ್ರಿಯಾಪದಕ್ಕೆ …’ತ್ತಾ’ ಪ್ರತ್ಯಯವನ್ನು ಸೇರಿಸುತ್ತದೆ.
ಉದಾ: go + ing = going = ಹೋಗುತ್ತಾ ; coming = ಬರುತ್ತಾ ; working = ಕೆಲಸ ಮಾಡುತ್ತಾ

I am ಗೆ ing ಸೇರಿದ ಕ್ರಿಯಾಪದವನ್ನು ಸೇರಿಸಿದರೆ ವರ್ತಮಾನಕಾಲದಲ್ಲಿ ನಾನು ಮಾಡುತ್ತಾ ಇರುವ ಕ್ರಿಯೆಗಳನ್ನು ಹೇಳುವ ಅಪೂರ್ಣ ವರ್ತಮಾನ ಕಾಲದ ( Present Continuous Tense) ವಾಕ್ಯಗಳನ್ನು ರಚಿಸಬಹುದು. ಉದಾ:

  1. I am going. = ನಾನು ಹೋಗುತ್ತಾ ಇದ್ದೇನೆ / ಹೋಗುತ್ತಿದ್ದೇನೆ.
  2. I am working. = ನಾನು ಕೆಲಸಮಾಡುತ್ತಾ ಇದ್ದೇನೆ. / ಕೆಲಸ ಮಾಡುತ್ತಿದ್ದೇನೆ.
  3. I am playing. = ನಾನು ಆಡುತ್ತಾ ಇದ್ದೇನೆ./ ಆಡುತ್ತಿದ್ದೇನೆ.

ಇದೇ ರೀತಿ You/We/They ಗಳೊಡನೆ are ನ ನಂತರ ing ಸೇರಿದ ವರ್ತಮಾನಕಾಲದ ಕ್ರಿಯಾಪದವನ್ನು ಸೇರಿಸಿ ವಾಕ್ಯ ರಚಿಸಬಹುದು. ಉದಾ:

  1. You are going. = ನೀವು ಹೋಗುತ್ತಿದ್ದೀರಿ. (ಹೋಗುತ್ತಾ ಇದ್ದೀರಿ)
  2. We are coming. = ನಾವು ಬರುತ್ತಿದ್ದೇವೆ. (ಬರುತ್ತಾ ಇದ್ದೇವೆ)
  3. They are working.= ಅವರು ಕೆಲಸಮಾಡುತ್ತಿದ್ದಾರೆ. (ಕೆಲಸಮಾಡುತ್ತಾ ಇದ್ದಾರೆ)

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.

  1. ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. = I am going to Bengaluru.
  2. ನಾನೊಂದು ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದೇನೆ. = I am working in a company.
  3. ನಾನು ಗೆಳೆಯರೊಡನೆ ಆಡುತ್ತಿದ್ದೇನೆ. = I am playing with my friends.
  4. ನಾನೊಂದು ಕಥೆ ಓದುತ್ತಿದ್ದೇನೆ. = I am reading a story.
  5. ನಾನು ನಿಮಗಾಗಿ ಕಾಯುತ್ತಿದ್ದೇನೆ. = I’m waiting for you.
  6. ನಾವು ಬಸ್ ಸ್ಟ್ಯಾಂಡಿನಲ್ಲಿ ನಿಂತುಕೊಂಡಿದ್ದೇವೆ. = We are standing at the bus stand.
  7. ನಾವು ನಮ್ಮ ಕೈಗಳನ್ನು ತೊಳೆಯುತ್ತಿದ್ದೇವೆ. = We are washing our hands.
  8. ಅವರು ನಮ್ಮನ್ನು ಕರೆಯುತ್ತಿದ್ದಾರೆ. = They are calling us.
  9. ನೀನು ನನ್ನ ಸಮಯ ಹಾಳು ಮಾಡುತ್ತಿದ್ದೀ. = You are wasting my time.
  10. ದನಗಳು ಹುಲ್ಲು ಮೇಯುತ್ತಿವೆ. = Cows are grazing.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ:
1. ನಾನು ಅವಳ ಬಗ್ಗೆ ಯೋಚಿಸುತ್ತಿದ್ದೇನೆ.
2. ನಾನು ನನ್ನ ಪೆನ್ ಹುಡುಕುತ್ತಿದ್ದೇನೆ.
3. ಅವರು ಬಸ್‍ನಲ್ಲಿ ಹೋಗುತ್ತಿದ್ದಾರೆ.
4. ಕಾಗೆಗಳು ಕೂಗುತ್ತಿವೆ.
5. ಬಸ್‍ಗಳು ವೇಗವಾಗಿ ಹೋಗುತ್ತಿವೆ.

(ಮುಂದುವರೆಯುವುದು)

Exit mobile version