ಪ್ರಿಯರೆ,
ಗಮನಿಸಿ, I/We/They ಗಳ ನಂತರ ಸಹಾಯಕ ಕ್ರಿಯಾಪದ do ವನ್ನು ಸೇರಿಸಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಹೇಳುವ ವಾಕ್ಯ ರಚನೆ ಕಲಿತಿರಿ, ಇಲ್ಲಿ ಬಳಸಲಾಗುವ ಹೆಚ್ಚಿನ ಎಲ್ಲಾ ಕ್ರಿಯಾಪದಗಳಿಗೆ ತ್ತೇನೆ, ತ್ತೇವೆ, ತ್ತಾರೆ/ತ್ತವೆ ಪ್ರತ್ಯಯ ಸೇರಿಕೊಳ್ಳುತ್ತವೆ. ಆದರೆ ಕ್ರಿಯಾಪದಗಳಾದ have, know, want ಗಳನ್ನು ಬಳಸಿದಾಗ ಹತ್ತಿರಇದೆ/ಹೊಂದಿದ್ದೇನೆ; ಗೊತ್ತು/ಗೊತ್ತಿದೆ ಹಾಗೂ ಬೇಕು/ಬಯಸುತ್ತೇನೆ ಎಂಬ ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಉದಾಹರಣೆಗಳನ್ನು ಗಮನಿಸಿ.
1. I (do) have money. = ನನ್ನ ಹತ್ತಿರ ಹಣವಿದೆ.
2. I (do) know English. = ನನಗೆ ಇಂಗ್ಲೀಷ್ ಗೊತ್ತು.
3. I (do) want coffee. = ನನಗೆ ಕಾಫಿ ಬೇಕು.
4. I (do) have a doubt. = ನನಗೊಂದು ಸಂದೇಹವಿದೆ.
I/we/they ಬದಲು ನಾಮಪದಗಳು ಕರ್ತೃಪದವಾಗಿದ್ದರೆ ಅವುಗಳ ಸರ್ವನಾಮದ ಸಹಾಯದಿಂದ ವಾಕ್ಯ ರಚಿಸಬೇಕು.
ಉದಾ – ನನ್ನ ಗೆಳೆಯರು ನಾಳೆ ಬರುತ್ತಾರೆ.
ವಾಕ್ಯದ ಕರ್ತೃಪದ- ನನ್ನ ಗೆಳೆಯರು. ಇದರ ಸರ್ವನಾಮ-ಅವರು= they. ಈಗ ವಾಕ್ಯವನ್ನು ‘ಅವರು ನಾಳೆ ಬರುತ್ತಾರೆ’
ಎಂದಾಗಿಸಿ ಅನುವಾದಿಸಿ. ಮೊದಲಿಗೆ ಕರ್ತೃಪದ + ಕೊನೆಯಪದ + ನಾಳೆ = They (do)come tomorrow.
ಈಗ `ಅವರು’ ಶಬ್ದಕ್ಕಾಗಿರುವ They ಯ ಬದಲಿಗೆ ‘ನನ್ನ ಗೆಳೆಯರು/My friends’ ನ್ನು ಸೇರಿಸಿ.
= My friends (do) come tomorrow. = ನನ್ನ ಗೆಳೆಯರು ನಾಳೆ ಬರುತ್ತಾರೆ.
ಕೆಳಗಿನ ಉದಾಹರಣೆಗಳನ್ನು ಗಮನಿಸಿ.
1. ದೀಪಗಳು ಉರಿಯುವವು. = Lights burn (Lamps do burn).
2. ಅವನ ಗೆಳೆಯರು ಕಾಲೇಜಿಗೆ ಹೋಗುತ್ತಾರೆ. = His friends go to college.
3. ಈ ರೈತರು ಅಕ್ಕಿ ಬೆಳೆಯುತ್ತಾರೆ. = These farmers grow rice.
4. ನನ್ನ ಗೆಳೆಯರಿಗೆ ಇಂಗ್ಲೀಷ್ ಗೊತ್ತು. = My friends know English.
ಇಲ್ಲಿಯತನಕ ನೀವು ಸರಳವಾಕ್ಯಗಳನ್ನು ರಚಿಸಲು ಕಲಿತಿರಿ. ಈಗ ಪ್ರಶ್ನೆಗಳನ್ನು ಹೇಗೆ ರಚಿಸುವುದೆಂದು ಕಲಿಯೋಣ.
ಇಂಗ್ಲೀಷ್ ಭಾಷೆಯಲ್ಲಿನ ಒಂದು ಪ್ರಶ್ನಾsಸೂಚಕ ವಾಕ್ಯ ಈ ಕೆಳಗಿನಂತಿರುತ್ತದೆ.
ಸಹಾಯಕ ಕ್ರಿಯಾಪದ + ಕರ್ತೃಪದ + ಕ್ರಿಯಾಪದ/ವಿಶೇಷಣ?
ಅಂದರೆ ಒಂದು ಪ್ರಶ್ನಾಸೂಚಕ ವಾಕ್ಯ ಯಾವಾಗಲೂ ಸಹಾಯಕ ಕ್ರಿಯಾಪದದಿಂದಲೇ ಆರಂಭವಾಗುತ್ತದೆ. ಇಲ್ಲವಾದರೆ
ಅದೊಂದು ಪ್ರಶ್ನೆಯಾಗುವುದೇ ಇಲ್ಲ. ಆದರೆ ಪ್ರಶ್ನಾವಾಕ್ಯಗಳಲ್ಲಿ ಈ ಸಹಾಯಕ ಕ್ರಿಯಾಪದದ ಮೊದಲಿಗೆ ಪ್ರಶ್ನಾರ್ಥಕವಿರುತ್ತದೆ.
ಗಮನಿಸಿ,They do go.= ಅವರು ಹೋಗುತ್ತಾರೆ.
ಇದು ‘ಅವರು ಹೋಗುತ್ತಾರೆಯೆ?’ ಎಂಬ ಪ್ರಶ್ನೆಯಾಗಬೇಕಾದರೆ ಈ ವಾಕ್ಯದಲ್ಲಿನ ಸಹಾಯಕ ಕ್ರಿಯಾಪದ do ವನ್ನು
ಮೊದಲಿಗೆ ಹೇಳಿ ನಂತರ ಕರ್ತೃಪದ they ಮತ್ತು ಕ್ರಿಯಾಪದ go ವನ್ನು ಸೇರಿಸಬೇಕು.
= Do they go? = ಅವರು ಹೋಗುತ್ತಾರೆಯೆ?
ಸಾಮಾನ್ಯವಾಗಿ ಮಾತನಾಡುವಾಗ ಸಹಾಯಕ ಕ್ರಿಯಾಪದವಾದ do ವನ್ನು ಹೇಳದೇ They go ಎಂದು ಸರಳವಾಕ್ಯಗಳಲ್ಲಿ ಹೇಳಬಹುದೆಂದು ಕಲಿತಿದ್ದೀರಿ. ಆದರೆ ಇದನ್ನು ಹೀಗೆಯೇ ಪ್ರಶ್ನೆಯಾಗಿಸಲು Go I? /I go? ಎಂದು ಕೇಳಲಾಗುವುದಿಲ್ಲ. ಏಕೆಂದರೆ ಈ ವಾಕ್ಯದ ಆರಂಭದಲ್ಲಿ ಸಹಾಯಕ ಕ್ರಿಯಾಪದವಿಲ್ಲ. ಆದುದರಿಂದ ಇಂತಹ ಸರಳವಾಕ್ಯಗಳಲ್ಲಿ ಮರೆಯಾಗಿರುವ ಸಹಾಯಕ ಕ್ರಿಯಾಪದವಾದ do ವನ್ನು ನೆನಪಿಸಿಕೊಂಡು ಅದನ್ನು ಆರಂಭದಲ್ಲಿ ಬಳಸುವುದರ ಮೂಲಕವೇ ಪ್ರಶ್ನಾವಾಕ್ಯಗಳನ್ನು ರಚಿಸಬೇಕು.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ನಾವು ನಾಳೆ ಅಲ್ಲಿಗೆ ಹೋಗುತ್ತೇವೆಯೆ? = Do we go there tomorrow?
2. ಅವರು ಇವತ್ತು ನಮ್ಮ ಮನೆಗೆ ಬರುತ್ತಾರೆಯೆ? = Do they come to your house today?
3. ಈ ವಿದ್ಯಾರ್ಥಿಗಳು ಚೆನ್ನಾಗಿ ಓದುವರೆ? = Do these students read well?
4. ಅವರು ಹಿಂದಿ ಪದ್ಯಗಳನ್ನು ಹಾಡುತ್ತಾರೆಯೆ? = Do they sing Hindi songs?
5. ನಿನ್ನ ಗೆಳೆಯರು ಚೆನ್ನಾಗಿ ಆಡುತ್ತಾರೆಯೆ? = Do your friends play well?
6. ಅವರೀಗ ಟಿವಿ ನೋಡಲು ಬಯಸುತ್ತಾರೆಯೆ? = Do they want to watch TV now?
7. ಅವರು ನಮಗೆ ಕಂಪ್ಯೂಟರ್ ಕಲಿಸುತ್ತಾರೆಯೆ? = Do they teach us computer?
8. ನಾವು ಇಂದು ಅವರಮನೆಯಲ್ಲಿ ಉಳಿಯುತ್ತೇವೆಯೆ? = Do we stay in their house tonight?
9. ಅವರಿಗೆ ನನ್ನ ಹೆಸರು ಗೊತ್ತೆ? = Do they know my name?
10.ಅವರು ನಮಗೆ ಓದಲು ಹೇಳುತ್ತಾರೆಯೆ? = Do they tell us to read?
(ಮುಂದುವರೆಯುವುದು)