Site icon Pracharya.in

#18 – Do_Part 3

ಪ್ರಿಯರೆ, ಇಂದು ಸಹಾಯಕ ಕ್ರಿಯಾಪದ ನಿಂದ ನಕಾರಾತ್ಮಕ ವಾಕ್ಯಗಳ ರಚನೆ ಹೇಗೆ ಮಾಡುವುದೆಂದು ತಿಳಿಯೋಣ.

I/We/ They + ಸಹಾಯಕ ಕ್ರಿಯಾಪದ do ನಿಂದ ರಚಿಸಲಾದ ಒಂದು ವಾಕ್ಯದ ಕೊನೆಯಲ್ಲಿ ನಕಾರಾತ್ಮಕ ಪ್ರತ್ಯಯವಾದ ..ವುದಿಲ್ಲ’ ಸೇರಿಸಲು ಸಹಾಯಕ ಕ್ರಿಯಾಪದ do ಗೆ not ಸೇರಿಸಬೇಕು. ಅಂದರೆ,

  1. ನಾನು ಹೋಗುವುದಿಲ್ಲ. =I do not go.
  2. ನಾವು ಬರುವುದಿಲ್ಲ. = We do not come.
  3. ಅವರು ಆಡುವುದಿಲ್ಲ. = They do not play.

ಗಮನಿಸಿ, ವಾಕ್ಯ ಸಕಾರಾತ್ಮಕವಾಗಿರಲಿ ಯಾ ನಕಾರಾತ್ಮಕವಾಗಿರಲಿ, ಅನುವಾದದ ನಿಯಮ ಬದಲಾಗುವುದಿಲ್ಲ. ಉದಾ:
ನಾನು ನಾಳೆ ಶಾಲೆಗೆ ಹೋಗುವುದಿಲ್ಲ.
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನಾನು / I
ವಾಕ್ಯದ ಕೊನೆಯ ಪದ = ಹೋಗು+ವುದಿಲ್ಲ  /go + do not
ವಾಕ್ಯದಲ್ಲಿ ಉಳಿದ ಪದ = ಶಾಲೆಗೆ, ನಾಳೆ / to school, tomorrow
ಎಲ್ಲವನ್ನೂ ಸೇರಿಸಿ. = I do not go to school tomorrow.

ನಕಾರಾತ್ಮಕ ವಾಕ್ಯಗಳಲ್ಲಿ ಹೆಚ್ಚಿನ ಕ್ರಿಯಾಪದಗಳು ..ವುದಿಲ್ಲ’ ಪ್ರತ್ಯಯ ಸೇರಿಸಿಕೊಂಡರೆ, know, want, have ಗಳು ಬೇರೆಯೇ ಅರ್ಥ ಕೊಡುತ್ತವೆ. ಉದಾ:

  1. I do not have. = ನನ್ನ ಹತ್ತಿರ ಇಲ್ಲ/ ನಾನು ಹೊಂದಿಲ್ಲ.
  2. We do not know. = ನಮಗೆ ಗೊತ್ತಿಲ್ಲ / ತಿಳಿದಿಲ್ಲ.
  3. They do not want. = ಅವರಿಗೆ ಬೇಡ/ ಅವರು ಬಯಸುವುದಿಲ್ಲ.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.

  1. ನನಗೆ ಇಂಗ್ಲಿಷ್ ಗೊತ್ತಿಲ್ಲ.. = I don’t know English.
  2. ನಾನು ಅಲ್ಲಿ ಕೆಲಸ ಮಾಡುವುದಿಲ್ಲ. = I don’t work there.
  3. ನಮಗೆ ಅವರ ಹೆಸರು ಗೊತ್ತಿಲ್ಲ. = We don’t know his name.
  4. ಈ ದನಗಳು ಹಾಲು ಕೊಡುವುದಿಲ್ಲ. = These cows don’t give milk.
  5. ನಾನು ನಿನಗಾಗಿ ಬಹಳಹೊತ್ತು ಕಾಯುವುದಿಲ್ಲ. = I don’t wait for you for* a long time.
  6. ನಾನು ಇವತ್ತು ನಿಮ್ಮಲ್ಲಿ ಉಳಿದುಕೊಳ್ಳುವುದಿಲ್ಲ. = I don’t stay with you tonight.
  7. ನಾವು ಇವತ್ತು ಸಿನಿಮಾಕ್ಕೆ ಹೋಗುವುದಿಲ್ಲ. = We don’t go to film today.
  8. ನಾನು ಅವನ ಜೊತೆ ಮಾತನಾಡುವುದಿಲ್ಲ. = I don’t talk to him.
  9. ನನ್ನ ಹತ್ತಿರ ಅಷ್ಟೊಂದು ಹಣವಿಲ್ಲ. = I don’t have so much money.
  10. ಅವರು ನಮ್ಮೊಡನೆ ಸೇರಿಕೊಳ್ಳುವುದಿಲ್ಲ. = They don’t join us.

for* = ಸಮಯ/ಕಾಲವನ್ನು ಹೇಳುವಾಗ ಯಾವಾಗಲೂ for ನ್ನು ಬಳಸಬೇಕು. ಉದಾಹರಣೆಗೆ,

  1. 10 ನಿಮಿಷದ ಕಾಲ = for 10 minutes.
  2. ಒಂದು ಘಂಟೆಯ ಕಾಲ = for an hour.
  3. ಮೂರು ತಿಂಗಳ ಕಾಲ = for three months.

(ಮುಂದುವರೆಯುವುದು)

Exit mobile version