Site icon Pracharya.in

#20 Do Part-5

ಪ್ರಿಯರೆ,
Do ವನ್ನು I, We, They ಗಳೊಡನೆ ಮಾತ್ರವಲ್ಲದೆ You ನ ಜೊತೆಯಲ್ಲೂ ಬಳಸಬಹುದು.
You ಕರ್ತೃಪದವಾಗಿರುವ ಆದೇಶ ವಾಕ್ಯಗಳ ರಚನೆಯನ್ನು ಹಿಂದೆ ನೀವು ಕಲಿತಿದ್ದೀರಿ. ಈ ಆದೇಶವಾಕ್ಯಗಳ ಮೊದಲಿಗೆ do ಸೇರಿಸಿದರೆ, ನೀನು…. ತ್ತೀಯಾ? / ನೀವು …ತ್ತೀರಾ? ಎಂಬ ರೂಪದ ಪ್ರಶ್ನೆಗಳನ್ನು ರಚಿಸಬಹುದು.
ಉದಾ: ನೀನು ಹೋಗು. = You go.
ಈ ವಾಕ್ಯದ ಆರಂಭದಲ್ಲಿ do ಸೇರಿಸಿದರೆ, ಅದೊಂದು ಪ್ರಶ್ನೆಯಾಗುತ್ತದೆ.
= Do you go? = ನೀನು ಹೋಗುತ್ತೀಯಾ? / ನೀವು ಹೋಗುತ್ತೀರಾ? / ನೀನು ಹೋಗುವೆಯಾ?

ಕೆಳಗಿನ ಉದಾಹರಣೆಗಳನ್ನು ಗಮನಿಸಿ.

  1. ನೀನು ಈಗ ಶಾಲೆಗೆ ಹೋಗುತ್ತೀಯಾ? = Do you go to school now?
  2. ನೀವು ಬ್ಯಾಂಕಿನಲ್ಲಿ ಕೆಲಸಮಾಡುತ್ತೀರಾ? = Do you work in a bank?
  3. ನನಗೆ ಇಂಗ್ಲೀಷ್ ಕಲಿಸಿಕೊಡುವಿರಾ? = Do you teach me English?
  4. ನೀನು ನಾಳೆ ಬರುವೆಯಾ? = Do you come tomorrow?
  5. ನೀನು ಈ ಕಾಲೇಜಿನಲ್ಲಿ ಕಲಿಯುತ್ತೀಯಾ? = Do you study in this college?

Do you ನಿಂದ ಆರಂಭವಾದ ವಾಕ್ಯಗಳ ಕೊನೆಯಲ್ಲಿರುವ ಕ್ರಿಯಾಪದಗಳಿಗೆ ‘ತ್ತೀಯ/ತ್ತೀರಾ’ ಪ್ರತ್ಯಯಗಳೇ ಸೇರುತ್ತವಾದರೂ know, want ಹಾಗೂ have – ಈ ಮೂರು ಶಬ್ದಗಳು ಕೊನೆಯ ಪದದಲ್ಲಿದ್ದಾಗ ಬೇರೆ ಪ್ರತ್ಯಯಗಳು ಸೇರಿಕೊಳ್ಳುತ್ತವೆ. Do you know? = ನಿನಗೆ ಗೊತ್ತಾ?/ಗೊತ್ತಿದೆಯೆ?
Do you have? = ನಿಮ್ಮ ಹತ್ತಿರ/ಬಳಿ ಇದೆಯೆ?/ ನೀವು ಹೊಂದಿದ್ದೀರಾ?
Do you want? = ನಿಮಗೆ ಬೇಕೆ?/ ನೀವು ಇಷ್ಟಪಡುತ್ತೀರಾ?

ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.

  1. ನಿನಗೆ ನನ್ನ ಹೆಸರು ಗೊತ್ತಿದೆಯೆ? = Do you know my name?
  2. ನಿಮ್ಮ ಹತ್ತಿರ ನೂರು ರೂಪಾಯಿ ಇದೆಯೆ? = Do you have Rs.100/-?
  3. ನಿನಗೆ ಅಣ್ಣ ಯಾ ಅಕ್ಕ ಇದ್ದಾರೆಯೆ? = Do you have a brother or a sister?
  4. ನಿನಗೆ ನೂರು ರೂಪಾಯಿ ಬೇಕೆ? = Do you want Rs.100/-?
  5. ನೀವು ಮನೆಗೆ ಹೋಗಲು ಬಯಸುತ್ತೀರಾ? = Do you want to go home now?
  6. ನೀವು ಈ ಕುರ್ಚಿಯಲ್ಲಿ ಕೂರುತ್ತೀರಾ? = Do you sit in this chair?
  7. ನೀವು ನಾಳೆ ನನ್ನನ್ನು ನನ್ನ ಆಫೀಸಿನಲ್ಲಿ ಭೇಟಿಯಾಗುವಿರಾ?
    Do you meet me at my office tomorrow?
  8. ನೀವು ನಿಮ್ಮ ಅಂಗಡಿಯಲ್ಲಿ ಪುಸ್ತಕಗಳನ್ನು ಮಾರುತ್ತೀರಾ?
    Do you sell books in your shop?

ಮೇಲಿನ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸುವುದಾದರೆ ಮತ್ತು ಪ್ರಶ್ನೆಯಲ್ಲಿನ ಕ್ರಿಯಾಪದವನ್ನು, ನಕಾರಾತ್ಮಕವಾಗಿ ಉತ್ತರಿಸುವುದಾದರೆ ಮತ್ತು + ಕ್ರಿಯಾಪದ ಸೇರಿಸಿ ಹೇಳಿ. ಉದಾ:

  1. Do you have brothers? Yes, I have a brother / I have brothers / I don’t have brothers.
  2. Do you know English? Yes, I know English / I don’t know English / I know a bit.
  3. Do you want money now? Yes, I want money now / I don’t want money now.
  4. Do you work in a bank? Yes, I work in a bank / I don’t work in any bank.
  5. Do you like chicken? Yes, I like chicken / I don’t like chicken, I like mutton.

(ಮುಂದುವರೆಯುವುದು)

Exit mobile version