Site icon Pracharya.in

#22 Do Part-7

ಪ್ರಿಯರೆ,
ಒಂದು ಪ್ರಶ್ನಾಸೂಚಕ ವಾಕ್ಯವನ್ನು ಅನುವಾದಿಸುವಾಗ ಮುಖ್ಯವಾಗಿ ವಾಕ್ಯದ ಕರ್ತೃಪದ ಮತ್ತು ಕೊನೆಯ ಪದಗಳಿಂದ ಆರಂಭಿಸಲಾಗುತ್ತದೆ. ಆದರೆ ಪ್ರಶ್ನಾರ್ಥಕ ಇರುವ ವಾಕ್ಯದಲ್ಲಿ ಮೊದಲಿಗೆ ಪ್ರಶ್ನಾರ್ಥಕವನ್ನು ಅನುವಾದಿಸಬೇಕು. ಆದುದರಿಂದ ಒಂದು ಪ್ರಶ್ನೆಯನ್ನು ಅನುವಾದಿಸುವ ಮೊದಲಿಗೆ ಅದರಲ್ಲಿ ಪ್ರಶ್ನಾರ್ಥಕ ಇದೆಯೇ ಎಂದು ಗಮನಿಸಿ. ಪ್ರಶ್ನಾರ್ಥಕ ಇದ್ದರೆ ಮೊದಲಿಗೆ ಅದನ್ನು ಅನುವಾದಿಸಿ; ನಂತರ ಆ ವಾಕ್ಯದಲ್ಲಿನ ಕರ್ತೃಪದ ಮತ್ತು ಕೊನೆಯಪದ ಸೇರಿಸಿ ಒಂದು ಪ್ರಶ್ನಾಸೂಚಕ ವಾಕ್ಯ ರಚಿಸಿ ಅದನ್ನು ಅನುವಾದಿಸಿ ಹಾಗೂ ಕೊನೆಯಲ್ಲಿ ಉಳಿದ ಶಬ್ದಗಳನ್ನು ಸೇರಿಸಿ.

ಈ ಪ್ರಶ್ನಾರ್ಥಕ ವಾಕ್ಯಗಳ ಜೋಡಣೆ ಈ ಕೆಳಗಿನಂತಿರಬೇಕು.
ಮೊದಲಿಗೆ ವಾಕ್ಯದಲ್ಲಿನ ಪ್ರಶ್ನಾರ್ಥಕ + ಸಹಾಯಕ ಕ್ರಿಯಾಪದ + ಕರ್ತೃಪದ + ಉಳಿದ ಪದಗಳು.

ಉದಾ: ನೀವು ಎಲ್ಲಿಗೆ ಹೋಗುತ್ತೀರಿ?
ಮೊದಲಿಗೆ ಈ ವಾಕ್ಯದಲ್ಲಿನ ಪ್ರಶ್ನಾರ್ಥಕ = ಎಲ್ಲಿಗೆ / where
ಸಹಾಯಕ ಕ್ರಿಯಾಪದ = ತ್ತೀರಿ / do
ಕರ್ತೃಪದ = ನೀವು / you
ವಾಕ್ಯದ ಕೊನೆಯ ಪದ = ಹೋಗು / go
ಈಗ ಎಲ್ಲವನ್ನೂ ಒಟ್ಟಿಗೆ ಸೇರಿಸಿ. = Where do do go?

ಮೇಲಿನಂತೆಯೇ ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.

  1. ನೀನು ಏನು ಹೇಳುತ್ತೀ? = What do you say?
  2. ನೀನು ಎಷ್ಟು ಹಣ್ಣುಗಳನ್ನು ತರುತ್ತೀ? = How many fruits do you want to buy?
  3. ನೀನು ಎಲ್ಲಿ ಕುಳಿತುಕೊಳ್ಳಲು ಬಯಸುತ್ತೀ? = Where do you want to sit?
  4. ನಿನ್ನ ಹತ್ತಿರ ಎಷ್ಟು ಹಣವಿದೆ? = How much money do you have?
  5. ನೀವು ಎಷ್ಟು ಘಂಟೆಗೆ ಅಂಗಡಿ ಮುಚ್ಚುತ್ತೀರಿ? = What time do you close your shop?
  6. ನೀವು ಬೆಳಿಗ್ಗೆ ಎಷ್ಟು ಘಂಟೆಗೆ ಏಳುತ್ತೀರಿ? = What time do you get up in the morning?
  7. ನೀವೇಕೆ ಇಂಗ್ಲೀಷ್‍ನಲ್ಲಿ ಮಾತಾಡುದಿಲ್ಲ? = Why don’t you talk in English?
  8. ನೀವು ಮದುವೆಗೆ ಎಷ್ಟು ಜನರನ್ನು ಕರೆಯುತ್ತೀರಿ? = How many people do you invite to wedding?
  9. ನೀವೀ ಹಣವನ್ನು ಯಾರಿಗೆ ಕೊಡಲು ಇಚ್ಚಿಸುವಿರಿ?= Whom do you want to give this money?
  10. ನೀವೇಕೆ ಹಣವನ್ನು ಚೆಕ್ ಮೂಲಕ ಕಳಿಸುವುದಿಲ್ಲ? = Why don’t you send the money by cheque?

ಸೂಚನೆ : ಮೇಲಿನಂತೆ 30 ಬೇರೆ ಬೇರೆ ಕ್ರಿಯಾಪದಗಳನ್ನು ಬಳಸಿ ನಿಮ್ಮ ದೈನಂದಿನ ಜೀವನದಲ್ಲಿ ಬಳಸಲಾಗುವ ನಿಮ್ಮದೇ ಆದ 30 ವಾಕ್ಯಗಳನ್ನು ಕನ್ನಡದಲ್ಲಿ ರಚಿಸಿ ಅವುಗಳನ್ನು ಇಂಗ್ಲೀಷ್‍ಗೆ ಅನುವಾದಿಸಿ. ಈ ಪ್ರಶ್ನಾವಾಕ್ಯಗಳನ್ನು ಒಂದು ಕನ್ನಡಿಯ ಎದುರು ನಿಂತುಕೊಂಡು ನಿಮ್ಮ ಪ್ರತಿಬಿಂಬಕ್ಕೆ (ಯಾರಿಗೋ ಹೇಳುತ್ತಿರುವಂತೆ) ಕೇಳಿ ಹಾಗೂ ನೀವೇ ಈ ಪ್ರಶ್ನೆಗಳಿಗೆ ಉತ್ತರಿಸಿ. ಉದಾ:

  1. How do you go? > I go by bus/bike/on foot.
  2. When do you come again? > I come tomorrow/in the evening/next week.
  3. What do you do now? > I wait for some time/I go home/I play with my friends.
  4. Why don’t you come to hotel? > I don’t have money/I don’t like food there.

(ಮುಂದುವರೆಯುವುದು)

Exit mobile version