ಇಂಪರೇಟಿವ್ ವಾಕ್ಯಗಳೆಂದರೆ ನಿಮ್ಮ ಎದುರಿಗಿರುವ ಒಬ್ಬ ವ್ಯಕ್ತಿಗೆ ನೀವು ಮಾಡುವ ವಿನಂತಿ, ಆಜ್ಞೆ, ಅಥವಾ ಸೂಚನೆಗಳನ್ನು ನೀಡುವ ವಾಕ್ಯಗಳು. ಇವೆಲ್ಲವೂ ಸರಳ ವಾಕ್ಯಗಳೇ ಆಗಿವೆ. ಒಂದು ಸರಳ ಕನ್ನಡ ವಾಕ್ಯವನ್ನು ಇಂಗ್ಲೀಷ್‍ಗೆ ಅನುವಾದಿಸುವಾಗ ಕನ್ನಡ ವಾಕ್ಯದಲ್ಲಿನ ಕರ್ತೃಪದ ಹಾಗೂ ಕೊನೆಯ ಪದವನ್ನು ಮೊದಲಿಗೆ ಅನುವಾದಿಸಿ ಉಳಿದ ಶಬ್ದಗಳನ್ನು ನಂತರ ಅನುವಾದಿಸಬೇಕೆಂಬ ನಿಯಮವನ್ನು ಹಿಂದಿನ ಅಧ್ಯಾಯದಲ್ಲಿ ಓದಿದ್ದೀರಿ. ಈಗ ಚಿಕ್ಕ ಆದೇಶ ವಾಕ್ಯಗಳನ್ನು ಇಂಗ್ಲೀಷ್‍ಗೆ ಅನುವಾದಿಸೋಣ.
ವಾಕ್ಯ 1. ನೀನು ಇಲ್ಲಿಗೆ ಬಾ.
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನೀನು / You
ವಾಕ್ಯದ ಕೊನೆಯ ಪದ = ಬಾ / come
ವಾಕ್ಯದಲ್ಲಿ ಉಳಿದ ಪದ = ಇಲ್ಲಿಗೆ / here
ಎಲ್ಲವನ್ನೂ ಸೇರಿಸಿ. = You come here.
ವಾಕ್ಯ 2. ನೀನು ಆ ಕಾಗದವನ್ನು ಸುಟ್ಟು ಹಾಕು.
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನೀನು / You
ವಾಕ್ಯದ ಕೊನೆಯ ಪದ = ಸುಟ್ಟು ಹಾಕು / burn
ವಾಕ್ಯದಲ್ಲಿ ಉಳಿದ ಪದ = ಆ ಕಾಗದವನ್ನು / that paper
ಎಲ್ಲವನ್ನೂ ಸೇರಿಸಿ. = You burn that paper.
ವಾಕ್ಯ 3. ನೀವು ಕೆಲಸವನ್ನು ಆರಂಭಿಸಿ
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ= ನೀವು / You
ವಾಕ್ಯದ ಕೊನೆಯ ಪದ = ಪ್ರಾರಂಭಿಸಿ / begin
ವಾಕ್ಯದಲ್ಲಿ ಉಳಿದ ಪದ = ಕೆಲಸವನ್ನು / the work
ಎಲ್ಲವನ್ನೂ ಸೇರಿಸಿ.= You begin the work.
ಸಾಮಾನ್ಯವಾಗಿ ಆದೇಶವಾಕ್ಯಗಳನ್ನು ನಮ್ಮೆದುರಿಗಿರುವ ವ್ಯಕ್ತಿಗೇ ಹೇಳುವುದಾದ್ದರಿಂದ, ನೀನು/ನೀವು ಪದಗಳನ್ನು ಹೇಳದೆ ಕೇವಲ ಆದೇಶಗಳನ್ನು ಮಾತ್ರ ಹೇಳಲಾಗುತ್ತದೆ. ಆದರೆ ಈ ವಾಕ್ಯಗಳ ಕರ್ತೃಪದ ನೀನು/ನೀವು- ಎಂಬುದು ಮಾತ್ರ ನಿಮಗೆ ಯಾವತ್ತೂ ತಿಳಿದಿರಬೇಕು ಹಾಗೂ ನೆನಪಿರಬೇಕು.
You come here. > Come here.
You break the glass. > Break the glass.
You burn that paper. > Burn that paper.
You begin the work. > Begin the work.
ಗಮನಿಸಿ, ಈ ವಾಕ್ಯಗಳ ಮೊದಲಿಗೆ ‘ದಯವಿಟ್ಟು’ ಶಬ್ದಕ್ಕಾಗಿ ಸೇರಿಸಿ ಹೇಳಿದರೆ ಅದೊಂದು ವಿನಂತಿಸುವ ವಾಕ್ಯವಾಗುತ್ತದೆ.
ಉದಾ: Please come here. = ದಯವಿಟ್ಟು ಇಲ್ಲಿ ಬನ್ನಿ.
Please begin the work. = ದಯವಿಟ್ಟು ಕೆಲಸವನ್ನು ಆರಂಭಿಸಿ.
ಮೇಲಿನಂತೆ ಕನಿಷ್ಟ 25 ಕ್ರಿಯಾಪದಗಳನ್ನು ಬಳಸಿ ನಿಮ್ಮೆದುರಿಗೆ ಇರುವವರಿಗೆ ಕೊಡುವ ಆದೇಶ ವಾಕ್ಯಗಳನ್ನು ರಚಿಸಿ ಹೇಳಿ.
(ಮುಂದುವರೆಯುವುದು)