ಪ್ರಿಯರೆ,
ಇಂದು ಸಹಾಯಕ ಕ್ರಿಯಾಪದ is ನ ಬಳಕೆಯನ್ನ ಅಭ್ಯಸಿಸೋಣ.
He/She/It ಗಳಿಗೆ ಸಹಾಯಕ ಕ್ರಿಯಾಪದವಾದ is ನ್ನು ಸೇರಿಸಿ ನಂತರ ನಾಮಪದ/ವಿಶೇಷಣಗಳನ್ನು ಸೇರಿಸಿದರೆ ವರ್ತಮಾನ ಕಾಲದಲ್ಲಿ ಅವನು, ಅವಳು ಮತ್ತು ಅದು -ಯಾರು, ಏನು, ಎಲ್ಲಿ ಮತ್ತು ಹೇಗೆ ಇದ್ದಾರೆ- ಎಂದು ಹೇಳುವ Simple Present Tense ನ ಸರಳವಾಕ್ಯಗಳನ್ನು ರಚಿಸಬಹುದು. ಉದಾ:
1. He is Raju. = ಅವನು ರಾಜು.
2. He is a little boy. = ಅವನೊಬ್ಬ ಚಿಕ್ಕ ಹುಡುಗ.
3. She is a student. = ಅವಳೊಬ್ಬ ವಿದ್ಯಾರ್ಥಿನಿ.
4. She is beautiful*. = ಅವಳು ಸುಂದರವಾಗಿದ್ದಾಳೆ.
5. It is very good. = ಅದು ತುಂಬಾ ಚೆನ್ನಾಗಿದೆ.
*ಗಂಡಸರು ಸುಂದರವಾಗಿದ್ದರೆ handsome, ಹೆಂಗಸರು/ಹುಡುಗಿಯರು ಸುಂದರವಾಗಿದ್ದರೆ beautiful ನ್ನೂ ಬಳಸಲಾಗುತ್ತದೆ.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ರಾಜು ನನ್ನ ಗೆಳೆಯ. = Raju is my friend.
2. ರಾಣಿ ಒಬ್ಬ ಶಿಕ್ಷಕಿ. = Rani is a teacher.
3. ರಾಜು ನಮ್ಮ ಮನೆಯಲ್ಲಿದ್ದಾನೆ. = Raju is in our house.
4. ಈ ಬಸ್ ಚೆನ್ನಾಗಿದೆ. = This bus is good.
5. ಅವಳ ಕೂದಲು ಉದ್ದವಾಗಿದೆ. = Her hair is long.
6. ಮಾವಿನಕಾಯಿ ಹಣ್ಣಾಗಿದೆ. = Mango is ripe.
7. ಆ ಮನೆ ತುಂಬಾ ದೊಡ್ಡದಿದೆ. = That house is very big.
8. ನನ್ನ ತಂದೆಗೆ ಸಿಟ್ಟು ಬಂದಿದೆ. = My father is angry
9. ಈ ಪುಸ್ತಕ ನನ್ನದು. = This book is mine.
10. ಆ ಪೆನ್ ನಿನ್ನದು. = That pen is yours.
11. ಈ ಬೈಕ್ ಅವನದ್ದು. = This bike is his.
12. ಈ ಮನೆ ನಮ್ಮದು. = This house is ours.
13. ಆ ಬ್ಯಾಗ್ ಅವಳದ್ದು. = That bag is hers.
14. ಆ ಜಾಗ ಅವರದ್ದು. = That land is theirs.
15. ಈ ಅನ್ನ ಹಳಸಿದೆ. = This rice is stale.
(ಮುಂದುವರೆಯುವುದು)