Site icon Pracharya.in

#32 – Is – Part 2

ಪ್ರಿಯರೆ,

He/She/It ಗಳೊಡನೆ is ಸೇರಿಸಿ ನಂತರ ing ಸೇರಿದ ವರ್ತಮಾನಕಾಲದ ಕ್ರಿಯಾಪದವನ್ನು ಸೇರಿಸಿದರೆ ಅವನು, ಅವಳು ಹಾಗೂ ಅದು- ಈಗ ನಡೆಸುತ್ತಾ ಇರುವ ಕ್ರಿಯೆಗಳನ್ನು ಹೇಳುವ ಅಪೂರ್ಣ ವರ್ತಮಾನಕಾಲದ ವಾಕ್ಯ (Present Continuous Tense) ರಚಿಸಬಹುದು.ಉದಾ:

1. He is going. = ಅವನು ಹೋಗುತ್ತಾ ಇದ್ದಾನೆ/ಹೋಗುತ್ತಿದ್ದಾನೆ.

2. She is coming. = ಅವಳು ಬರುತ್ತಾ ಇದ್ದಾಳೆ./ಬರುತ್ತಿದ್ದಾಳೆ.

3. It is working. = ಅದು ಕೆಲಸಮಾಡುತ್ತಿದೆ./ ಕೆಲಸ ಮಾಡುತ್ತಾ ಇದೆ.

ಕೆಳಗಿನ ವಾಕ್ಯಗಳನ್ನು ಅನುವಾದಿಸಿ.

1. ಅವಳು ಈ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದಾಳೆ. = She is working in this company.

2. ಈ ಬಸ್ ಹುಬ್ಬಳ್ಳಿಗೆ ಹೋಗುತ್ತಿದೆ. = This bus is going to Hubli.

3. ರಾಜು ನಿನಗಾಗಿ ಅಲ್ಲಿ ಕಾಯುತ್ತಿದ್ದಾನೆ. = Raju is waiting there for you.

4. ಅವನು ವಿವೇಚನೆಯಿಲ್ಲದೆ ಮಾತನಾಡುತ್ತಿದ್ದಾನೆ. = He is talking without sense

5. ಈಗ ಮಳೆ ಬರುತ್ತಾ ಇದೆ. = It is raining now.

6. ಅವಳು ಕೆಮ್ಮುತ್ತಿದ್ದಾಳೆ. = She is coughing

7. ಅವನು ಗೊರಕೆ ಹೊಡೆಯುತ್ತಿದ್ದಾನೆ. = He is snoring.

8. ಅವನು ನಿನಗಾಗಿ ಕಾಯತ್ತಿದ್ದಾನೆ.. = He is waiting for you.

9. ಬಾವುಟ ಪಟಪಟನೆ ಹೊಡೆದಾಡುತ್ತಿದೆ. = Flag is fluttering.

10. ಅವನು ಕಂಪ್ಯೂಟರ್ ಕಲಿಯುತ್ತಿದ್ದಾನೆ.. = He is studying computer.

(ಮುಂದುವರೆಯುವುದು)

Exit mobile version