ಪ್ರಿಯರೆ,
ಇಂಗ್ಲೀಷ್ ವಾಕ್ಯಗಳ ರಚನಾ ಕ್ರಮ / Pattern of English sentences ಈ ಕೆಳಗಿನಂತಿರುತ್ತದೆ.
1. ಸರಳ ವಾಕ್ಯ : ಕರ್ತೃಪದ + ಸಹಾಯಕ ಕ್ರಿಯಾಪದ + ನಾಮಪದ/ನಾಮ ವಿಶೇಷಣ / ಕ್ರಿಯಾ ವಿಶೇಷಣ / ಕ್ರಿಯಾಪದ
Simple/Assertive Sentence: Subject + Helping verb + Noun/Adj/Adv/verb
ಉದಾ: Ravi/He + is + Ravi/a boy/ tall / here / working
ಒಂದು ಸರಳ ವಾಕ್ಯವನ್ನು ಇಂಗ್ಲೀಷ್‍ನಲ್ಲಿ Simple ಅಥವಾ Assertive Sentence ಎಂದು ಕರೆಯಲಾಗುತ್ತದೆ. ಇದರಲ್ಲಿ ಮೇಲೆ ಕಾಣಿಸಿದಂತೆ ಶಬ್ದಗಳ ಜೋಡಣೆ ಇರುತ್ತದೆ. ಉದಾ:
He is Ravi. = ಅವನು ರವಿ.
Ravi is a boy. = ರವಿ ಒಬ್ಬ ಹುಡುಗ.
Ravi/He is tall. = ರವಿ/ಅವನು ಉದ್ದವಾಗಿದ್ದಾನೆ.
He/Ravi is here. = ಅವನು/ರವಿ ಇಲ್ಲಿ ಇದ್ದಾನೆ.
Ravi/He is working. = ರವಿ/ಅವನು ಕೆಲಸ ಮಾಡುತ್ತಿದ್ದಾನೆ.
ಮೇಲಿನ ವಾಕ್ಯಗಳಲ್ಲಿನ ಸಹಾಯಕ ಕ್ರಿಯಾಪದಕ್ಕೆ not ಸೇರಿಸಿದರೆ ಅದು ವಾಕ್ಯದ ಕೊನೆಯ ಪದಕ್ಕೆ ಅಲ್ಲ/ಇಲ್ಲ ಎಂಬ ಪ್ರತ್ಯಯ ಸೇರಿಸುವುದರಿಂದ ಅದು ನಕಾರಾತ್ಮಕ ಸರಳ ವಾಕ್ಯವಾಗುತ್ತದೆ. ಉದಾ:
He is not Ravi. = ಅವನು ರವಿಯಲ್ಲ.
Ravi/He is not tall. = ರವಿ/ಅವನು ಉದ್ದವಾಗಿಲ್ಲ.
He/Ravi is not here. = ಅವನು/ರವಿ ಇಲ್ಲಿ ಇಲ್ಲ.
Ravi/He is not working. = ರವಿ/ಅವನು ಕೆಲಸ ಮಾಡುತ್ತಿಲ್ಲ.
2. ಪ್ರಶ್ನಾಸೂಚಕ ವಾಕ್ಯ : ಸಹಾಯಕ ಕ್ರಿಯಾಪದ + ಕರ್ತೃಪದ + ನಾಮಪದ/ನಾಮ ವಿಶೇಷಣ/ ಕ್ರಿಯಾ ವಿಶೇಷಣ/ ಕ್ರಿಯಾಪದ
Questions : Helping verb + Subject + Noun/Adj/Adv/verb
ಪ್ರಶ್ನಾವಾಕ್ಯಗಳಲ್ಲಿ ಆರಂಭದಲ್ಲೇ ಸಹಾಯಕ ಕ್ರಿಯಾಪದವಿದ್ದು ಅದರ ನಂತರ ಕರ್ತೃಪದ ಹಾಗೂ ಉಳಿದ ಶಬ್ದಗಳೀರುತ್ತವೆ. ಈ ಜೋಡಣೆಯಿಂದಾಗಿ ಈ ವಾಕ್ಯಗಳ ಕೊನೆಯಪದ ಈ ಕೆಳಗಿನಂತೆ ಬದಲಾಗುತ್ತದೆ. ಉದಾ:
Is he Ravi? = ಅವನು ರವಿಯೆ?
Is He/Ravi tall? = ರವಿ/ಅವನು ಉದ್ದವಾಗಿದ್ದಾನೆಯೆ?
Is He/Ravi here? = ಅವನು/ರವಿ ಇಲ್ಲಿ ಇದ್ದಾನೆಯೆ?
Is Ravi/he working? = ರವಿ/ಅವನು ಕೆಲಸ ಮಾಡುತ್ತಿದ್ದಾನೆಯೆ?
ಗಮನಿಸಿ, ಒಂದು ಪ್ರಶ್ನಾಸೂಚಕ ವಾಕ್ಯದ ಆರಂಭದಲ್ಲಿ ಸಹಾಯಕ ಕ್ರಿಯಾಪದಕ್ಕೆ ಮಾತ್ರ ಅವಕಾಶ. ಆದರೆ ನಕಾರಾತ್ಮಕ ವಾಕ್ಯವನ್ನು ಪ್ರಶ್ನಾಸೂಚಕವಾಗಿಸುವಾಗ not ಸಹಾಯಕ ಕ್ರಿಯಾಪದವಲ್ಲವಾದುದರಿಂದ ಅದನ್ನು ಈ ಕೆಳಗಿನಂತೆಯೇ ರಚಿಸಬೇಕು. ಉದಾ:
He is not Ravi > Is he not Ravi? (ಅವನು ರವಿಯಲ್ಲವೆ?)
ಆದರೆ ಇದರಲ್ಲಿನ not ನ್ನು ಕತ್ತರಿಸಿ n’t ಎಂದಾಗಿಸಿ ಸಹಾಯಕ ಕ್ರಿಯಾಪದಕ್ಕೆ ಸೇರಿಸಿ. ಈಗ ಆರಂಭದಲ್ಲಿ ಸಹಾಯಕ ಕ್ರಿಯಾಪದ ಒಂದೇ ಇದ್ದಂತಾಗುವುದರಿಂದ ಹೀಗೂ ಕೇಳಲಾಗುತ್ತದೆ > Isn’t he Ravi? / Isn’t he tall?
3. ಪ್ರಶ್ನಾರ್ಥಕವಿರುವ ಪ್ರಶ್ನೆ = ಪ್ರಶ್ನಾರ್ಥಕ, + ಸ. ಕ್ರಿಯಾಪದ, + ನಾಮಪದ/ವಿಶೇಷಣ/ಕ್ರಿಯಾಪದಗಳಿರುತ್ತವೆ. ಉದಾ:
Who is he/Ravi? = ಅವನು ಯಾರು? / ರವಿ ಯಾರು?
What is Ravi/he doing? = ರವಿ / ಅವನು ಏನು ಮಾಡುತ್ತಿದ್ದಾನೆ?
(ಮುಂದುವರೆಯುವುದು)