ಮಿತ್ರರೆ,
Preposition ಗಳು noun, pronoun, verb ಗಳೊಡನೆ ಬಳಸಲ್ಪಡುತ್ತವೆ ಮತ್ತು ಅವುಗಳೊಡನೆ ಇರುವ ಸಂಬಂಧ, ಸ್ಥಾನ ಹಾಗೂ ಸಮಯವನ್ನು ಸೂಚಿಸುತ್ತವೆ. Pre = ಮೊದಲಿಗೆ ಹಾಗೂ Position = ಸ್ಥಿತಿ. ಹಾಗಾಗಿ ಸ್ಥಿತಿ/ ಸಂಬಂಧವನ್ನು ಹೇಳಬೇಕಾದಾಗ preposition ಗಳನ್ನು ಸರ್ವನಾಮ/ ಕ್ರಿಯಾಪದದ ಮೊದಲಲ್ಲೇ ಬಳಸಬೇಕು.
(ಕ್ರಿಯಾಪದದ ನಂತರ ಬಳಸಿದರೆ ಇವುಗಳು ಆ ಕ್ರಿಯಾಪದದ ಮೂಲ ಅರ್ಥವನ್ನೇ ಬದಲಾಯಿಸುತ್ತವೆ ಹಾಗೂ ಅಂತಹ ರಚನೆಗಳನ್ನು phrase ಎಂದು ಕರೆಯಲಾಗುತ್ತದೆ). ಇವುಗಳನ್ನು ಒಂದೊಂದಾಗಿ ತಿಳಿಯೋಣ.
a. ON (ಆನ್) = ನ/ರ/ಯ/ದ/ಳ ಮೇಲೆ
ನ/ರ/ಯ/ದ/ಳ ಮೇಲೆ= ನ ಮೇಲೆ /ರ ಮೇಲೆ /ಯ ಮೇಲೆ /ದ ಮೇಲೆ /ಳ ಮೇಲೆ ಎಂದು ಅರ್ಥೈಸಿಕೊಳ್ಳಿ.
ಈ ವಾಕ್ಯವನ್ನು ನೋಡಿ – ಮೇಜಿನ ಮೇಲೆ ಚೆಂಡು ಇದೆ.
ನಾವೀಗ ಈ ವಾಕ್ಯದಲ್ಲಿನ ‘ಮೇಜಿನ ಮೇಲೆ’ ಯನ್ನು ಮಾತ್ರ ಅನುವಾದಿಸೋಣ. ಗಮನಿಸಿ, ಇಲ್ಲಿ ‘ಮೇಜು’ ಶ|ಬ್ದಕ್ಕೆ ‘ನ ಮೇಲೆ’ ಸೇರಿಕೊಂಡಿದೆ. ‘ನ ಮೇಲೆ’ ಯನ್ನು ಪ್ರತಿನಿಧಿಸುವುದು on. ಈ ‘on’ ಒಂದು preposition ಅಂದರೆ ನಾಮಪದದ ಮೊದಲಿಗೇ ಹೇಳಬೇಕಾದ ಶಬ್ದವಾದುದರಿಂದ on ನ್ನು ಮೊದಲಿಗೆ ಹೇಳಿ ನಂತರ ಮೇಜು / table ನ್ನು ಸೇರಿಸಿ. > on the table = ಮೇಜಿನ ಮೇಲೆ
ಗಮನಿಸಿ,…ಮೇಲೆ ಎಂಬ ಪ್ರತ್ಯಯವನ್ನು ಯಾವ ಶಬ್ದಕ್ಕೆ ಸೇರಿಸಬೇಕೋ ಆ ಶಬ್ದದ ಮೊದಲಿಗೇ on’ನ್ನು ಸೇರಿಸಬೇಕು. ಕನ್ನಡದಲ್ಲಿರುವಂತೆ ‘ಮೇಜಿನ ಮೇಲೆ’ ಯನ್ನು ‘ಮೇಜಿನ + ಮೇಲೆ = table + on ಎಂದು ಅನುವಾದಿಸುವುದು ತಪ್ಪು.. ಇದೇ ರೀತಿ ಕೆಳಗಿನ ಶಬ್ದ ಭಾಗಗಳನ್ನು ಅಭ್ಯಸಿಸಿ.
ಈ ಪುಸ್ತಕದ ಮೇಲೆ | = | on this book |
ಆ ಪೆಟ್ಟಿಗೆಯ ಮೇಲೆ | = | on that box |
ನಿನ್ನ ಬೆನ್ನಿನ ಮೇಲೆ | = | on your back |
ಕೆಳಗಿನ ವಾಕ್ಯಭಾಗಗಳನ್ನು ಅನುವಾದಿಸಿ.
1. ಆ ಗೋಡೆಯ ಮೇಲೆ
2. ತಂತಿಯ ಮೇಲೆ
3. ಆ ಕಾರ್‍ನ ಮೇಲೆ
4. ಅವನ ತಲೆಯ ಮೇಲೆ
ವಾಕ್ಯಗಳ ಅನುವಾದ :
1. On that wall
2. On the wire
3. On that car
4. On his head
ನಿಮ್ಮ ಉತ್ತರ ಈ ಮೇಲಿನಂತೆಯೇ ಇದ್ದರೆ ನೀವು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀರೆಂದರ್ಥ. ಈಗೊಂದು ಪ್ರಶ್ನೆ. ಮೇಲಿನ ಭಾಗಗಳಲ್ಲಿ ಕೊನೆಯದು – ಅವನ ತಲೆಯ ಮೇಲೆ. ಇದನ್ನು ಈ ಕೆಳಗಿನಂತೆ ಅನುವಾದಿಸಿದರೆ ಹೇಗೆ?
1. ಅವನ = his
2. ತಲೆಯ ಮೇಲೆ = ಯ ಮೇಲೆ + ತಲೆ = on + head
3. = his on head. ಹೀಗೇಕೆ ಆಗುವುದಿಲ್ಲ?