Site icon Pracharya.in

#7- PREPOSITIONS / ಉಪಸರ್ಗಾವ್ಯಯಗಳು – Part 2

ಮಿತ್ರರೆ,

ಈ ಅಂಕಣವನ್ನು ಅನುಸರಿಸುತ್ತಿರುವವರಿಗೆ ಧನ್ಯವಾದಗಳು. ನೀವೀಗ ಇಂಗ್ಲೀಷ್ ಮಾತನಾಡಲು ಅತ್ಯಗತ್ಯವಾದ Parts of speech ನ್ನು ಕಲಿಯುತ್ತಿದ್ದೀರಿ, ಇಲ್ಲಿ ಕೊಡಲಾಗುವ ಉದಾಹರಣೆಗಳನ್ನು ಅರ್ಥಮಾಡಿಕೊಂಡು ಕನ್ನಡದಲ್ಲಿ ನಿಮ್ಮದಾದ ಉದಾಹರಣೆಗಳನ್ನು ರಚಿಸಿ ಅನುವಾದಿಸಿ. ಆಗ ಮಾತ್ರ ಇವೆಲ್ಲವೂ ನಿಮ್ಮ ನೆನಪಿನಲ್ಲುಳಿಯುತ್ತವೆ. ಇಲ್ಲವಾದರೆ ಖಂಡಿತಾ ಮರೆತು ಹೋಗುತ್ತವೆ.

IN (ಇನ್) = ನ/ರ/ಯ/ದ/ಳ …ಲ್ಲಿ/ಒಳಗೆ

ಉದಾ:

 ಪೆಟ್ಟಿಗೆಯಲ್ಲಿ  = in the box
ನನ್ನ ಮನೆಯಲ್ಲಿ/ಮನೆಯೊಳಗೆ  = in my house
ಅವಳ ಚೀಲದಲ್ಲಿ  = in her bag

 

FROM (ಫ್ರಾಮ್) = ಇಂದ

ಉದಾ:

from Bengaluru  = ಬೆಂಗಳೂರಿನಿಂದ
from Raju  = ರಾಜುವಿನಿಂದ
from your college  = ನಿನ್ನ ಕಾಲೇಜಿನಿಂದ

 

FOR (ಫಾರ್) ….ಗಾಗಿ / ಕ್ಕಾಗಿ / ಗೋಸ್ಕರ
for ನ್ನು ನಾಮಪದ/ಸರ್ವನಾಮಗಳ ಮೊದಲಿಗೆ ಸೇರಿಸಿದರೆ ..ಕ್ಕಾಗಿ/ಗಾಗಿ/ಗೋಸ್ಕರ ಎಂಬ ಪ್ರತ್ಯಯಗಳು ಸೇರಿಕೊಳ್ಳುತ್ತವೆ.
ಉದಾ:

 

for Rama  = ರಾಮನಿಗಾಗಿ / ರಾಮನಿಗೋಸ್ಕರ
for money  = ಹಣಕ್ಕಾಗಿ / ಹಣಕ್ಕೋಸ್ಕರ
for my father  = ನನ್ನ ತಂದೆಗಾಗಿ / ತಂದೆಗೋಸ್ಕರ

 

WITH (ವಿದ್) = ಒಡನೆ/ ಜೊತೆಗೆ/ ಒಂದಿಗೆ/ ಒಟ್ಟಿಗೆ
ಒಡನೆ/ಜೊತೆಗೆ ಪ್ರತ್ಯಯಗಳಿಗಾಗಿ ನಾಮಪದ/ಸರ್ವನಾಮಗಳ ಮೊದಲಿಗೆ with ನ್ನು ಸೇರಿಸಬೇಕು.

ಉದಾ:

with Raju  = ರಾಜುವಿನೊಡನೆ / ರಾಜುವಿನ ಜೊತೆಗೆ
with his mother  = ಅವನ ತಾಯಿಯ ಜೊತೆಗೆ
with your book  = ನಿನ್ನ ಪುಸ್ತಕದೊಡನೆ

 

TO + NOUN = ನಾಮಪದ + ಕ್ಕೆ / ಗೆ

To’ವನ್ನು ಒಂದು ನಾಮಪದದ ಮೊದಲಿಗೆ ಸೇರಿಸಿದರೆ, ಆ ನಾಮಪದಕ್ಕೆ -ಕ್ಕೆ/ ಗೆ- ಪ್ರತ್ಯಯ ಸೇರಿಕೊಳ್ಳುತ್ತದೆ.

ಉದಾ:

to Rama  = ರಾಮನಿಗೆ
to America  = ಅಮೇರಿಕಕ್ಕೆ
to your father  = ನಿನ್ನ ತಂದೆಯವರಿಗೆ

 

TO + VERB = ಕ್ರಿಯಾಪದ + ಲು / ಲಿಕ್ಕೆ

to ವನ್ನು ಒಂದು ಕ್ರಿಯಾಪದದ ಮೊದಲಿಗೆ ಸೇರಿಸಿದರೆ, ಅದು ಆ ಕ್ರಿಯಾಪದಕ್ಕೆ -ಲು/ ಲಿಕ್ಕೆ- ಯನ್ನು ಸೇರಿಸುತ್ತದೆ.

ಉದಾ:

to go  = ಹೋಗಲು/ ಹೋಗಲಿಕ್ಕೆ
to speak  = ಮಾತನಾಡಲು/ ಮಾತನಾಡಲಿಕ್ಕೆ
to write a letter  = ಒಂದು ಪತ್ರ ಬರೆಯಲು/ ಬರೆಯಲಿಕ್ಕೆ

 

OF (ಅಫ್) = ನ/ ರ/ ಯ/ ದ/ ಳ

ಒಂದು ನಾಮಪದ/ಸರ್ವನಾಮದ ಮೊದಲಿಗೆ of ನ್ನು ಸೇರಿಸಿದರೆ ಅದು ಆ ನಾಮಪದ/ಸರ್ವನಾಮಕ್ಕೆ ನ/ರ/ಯ/ದ/ಳ ವನ್ನು ಸೇರಿಸುತ್ತದೆ. (noun/ pronoun ಗಳಿಗೆ ‘s ನ್ನು ಸೇರಿಸಿಯೂ ಇದೇ ಅರ್ಥ ಪಡೆಯಬಹುದು.)

ಉದಾ:

of Rama = ರಾಮನ / Rama’s
of Radha = ರಾಧಾಳ / Radha’s
of the tree = ಮರದ / the tree’s

ಸಾಮಾನ್ಯವಾಗಿ oಜಿ ನ ಮೊದಲಿಗೆ ಕನಿಷ್ಟ ಒಂದು ಶಬ್ದವಿದ್ದು ಅದು ಯಾವಾಗಲೂ of ನ ನಂತರ ಇರುವ ಶಬ್ದಕ್ಕೇ ಸಂಬಂಧಿಸಿರುತ್ತದೆ. ಉದಾ: book of Rama = ಪುಸ್ತಕ, ರಾಮನ ಎಂದಲ್ಲ, ರಾಮನ ಪುಸ್ತಕ ಎಂದಾಗುತ್ತದೆ.
ಇದನ್ನು ’s ಬಳಸಿ ಹೇಳುವುದಾದರೆ, Rama’s book ಎಂದಾಗುತ್ತದೆ. ಅದೇ ರೀತಿ,

son of Radha = ರಾಧಾಳ ಮಗ = Radha’s son
branch of the tree = ಮರದ ಗೆಲ್ಲು/ಟೊಂಗೆ = Tree’s branch**
car of my father = ನನ್ನ ತಂದೆಯ ಕಾರ್ = My father’s car

ಗಮನಿಸಿ, ಒಬ್ಬ ವ್ಯಕ್ತಿ/ ಒಂದು ವಸ್ತುವಿನೊಡನೆ ಇನ್ನೊಬ್ಬ ವ್ಯಕ್ತಿ/ವಸ್ತುವಿನ ಸಂಬಂಧವನ್ನು ಹೇಳಲು ಬಳಸುವ ನ/
ರ/ ಯ/ ದ/ ಳ ಅಕ್ಷರಕ್ಕಾಗಿ of ನ್ನು ಬಳಸಬೇಕು. ಇಲ್ಲಿ ನ/ರ/ಯ/ದ/ಳ-ದ ನಂತರ ಇರುವ ಶಬ್ದವನ್ನು ಮೊದಲಿಗೆ
ಅನುವಾದಿಸಿ ನಂತರ ನ/ರ/ಯ/ದ/ಳಕ್ಕಾಗಿ of ನ್ನು ಹೇಳಿ ಆಮೇಲೆ ಇದರ ಮೊದಲಿನ ಶಬ್ದವನ್ನು ಅನುವಾದಿಸಬೇಕು.
ಉದಾ: ಶಂಕರನ ಮನೆ – ಇಲ್ಲಿ ಒಬ್ಬ ವ್ಯಕ್ತಿ+ಒಂದು ವಸ್ತುವಿನ ನಡುವೆ -ನ- ಇದೆ. ಈಗ -ನ-ದ ನಂತರ ಇರುವ
ಮನೆಯನ್ನು ಮೊದಲಿಗೆ ಹೇಳಿ, ಅದಕ್ಕೆ of ಸೇರಿಸಿ ನಂತರ ಶಂಕರ- ಪದವನ್ನು ಸೇರಿಸಬೇಕು.

= house of Shankar / Shankar’s house.

** ’s ನ್ನು ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ/ವಸ್ತುವಿನೊಡನೆ ಇರುವ ಸಂಬಂಧ ಹೇಳಲು ಬಳಸಬಹುದೇ ಹೊರತು ಒಂದು
ವಸ್ತುವಿಗೆ ಇನ್ನೊಂದು ವಸ್ತುವಿನೊಡನೆ ಇರುವ ಸಂಬಂಧ ಹೇಳಲು ಬಳಸಬಾರದು.
ಉದಾ:

Tree’s branch, Car’s door – ಇವು ತಪ್ಪು ಬಳಕೆಗಳು.

ಇವುಗಳನ್ನು branch of the tree/ door of the car ಎಂದೇ ಹೇಳಬೇಕು.

Exit mobile version