Site icon Pracharya.in

14 – VERB + PRONOUN/NOUN

VERB + PRONOUN/NOUN = ಕ್ರಿಯಾಪದ+ನಾಮಪದ/ಸರ್ವನಾಮ = ನಾಮಪದ/ಸರ್ವನಾಮ+ನ್ನು/ಗೆ

ಇಂಗ್ಲೀಷ್‍ನಲ್ಲಿ ‘ನ್ನು’ ಪ್ರತ್ಯಯವನ್ನು ಪ್ರತಿನಿಧಿಸಲು ಯಾವುದೇ ಶಬ್ದವಿಲ್ಲ. ಆದರೆ ಮೇಲಿನ ಸೂತ್ರದ ಪ್ರಕಾರ ಒಂದು ಕ್ರಿಯಾಪದದ ನಂತರ ಒಂದು ಸರ್ವನಾಮ/ನಾಮಪದವನ್ನು ಸೇರಿಸಿದರೆ ಆ ಸರ್ವನಾಮ/ನಾಮಪದಕ್ಕೆ ‘ನ್ನು’ ಅಥವಾ ‘ಗೆ’ ಪ್ರತ್ಯಯ ಸೇರಿಕೊಳ್ಳುತ್ತದೆ. ಸಾಮಾನ್ಯವಾಗಿ ‘ಗೆ’ ಪ್ರತ್ಯಯಕ್ಕಾಗಿ ಉಪಸರ್ಗವಾದ to ವನ್ನು ನಾಮಪದದ ಮೊದಲಿಗೆ ಸೇರಿಸಲಾಗುತ್ತದೆ. ಆದರೆ ಈ ನಿಯಮದಿಂದಾಗಿ ಒಂದು ಕ್ರಿಯಾಪದದ ನಂತರ ಇರುವ ಸರ್ವನಾಮಕ್ಕೆ ‘ಗೆ’ ಪ್ರತ್ಯಯಕ್ಕಾಗಿ to ಸೇರಿಸಿದರೆ ತಪ್ಪಾಗುತ್ತದೆ. ಉದಾಹರಣೆಗೆ,

1. ನೀನು ನನಗೆ ಕೊಡು – ಈ ವಾಕ್ಯವನ್ನು ಅನುವಾದಿಸುವಾಗ,
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನೀನು / You
ವಾಕ್ಯದ ಕೊನೆಯ ಪದ = ಕೊಡು / give
ವಾಕ್ಯದಲ್ಲಿ ಉಳಿದ ಪದ = ನನಗೆ / to me
ಎಲ್ಲವನ್ನೂ ಸೇರಿಸಿ. = You give to me.

ಆದರೆ ಮೇಲಿನ ನಿಯಮದ ಪ್ರಕಾರ, ಕ್ರಿಯಾಪದ give ನ ನಂತರ ಸರ್ವನಾಮ me ಸೇರಿಸಿದರೆ ಕ್ರಿಯಾಪದದ ನಂತರ ಇರುವುದರಿಂದ ಅದಕ್ಕೆ ‘ನ್ನು’ ಅಥವಾ ‘ಗೆ’ ಪ್ರತ್ಯಯ ತನ್ನಷ್ಟಕ್ಕೆ ಸೇರಿಕೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ನನಗೆ’ ಶಬ್ದಕ್ಕಾಗಿ to me ಸೇರಿಸಿದರೆ ತಪ್ಪಾಗುತ್ತದೆ. ಆದುದರಿಂದ to ಸೇರಿಸಲೇಬಾರದು. = You give me. / Give me.
ಗಮನಿಸಿ, ಈ ಜೋಡಣೆ -ನನಗೆ- ಮಾತ್ರವಲ್ಲದೆ ‘ನನ್ನನ್ನು’ ಶಬ್ದವನ್ನೂ ಪ್ರತಿನಿಧಿಸುವುದರಿಂದ ಇಲ್ಲಿ Give me = ನೀನು ನನಗೆ ಕೊಡು ಹಾಗೂ ನೀನು ನನ್ನನ್ನು ಕೊಡು ಎಂದೂ ಆಗುತ್ತದೆ. ಈಗ ಮೇಲಿನ ವಾಕ್ಯವನ್ನು
‘ನೀನು ನನಗೆ ಹಣ ಕೊಡು’ (ಎಂದಾಗಿಸಿದರೆ) = You give me money.
‘ನೀನು ನನ್ನನ್ನು ಅವನಿಗೆ ಕೊಡು’ = You give me to him.

2. ನಮಗೆ ಕಲಿಸಿ.
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನೀವು / You
ವಾಕ್ಯದ ಕೊನೆಯ ಪದ = ಕಲಿಸು / teach
ವಾಕ್ಯದಲ್ಲಿ ಉಳಿದ ಪದ = ನಮಗೆ / to us
ಎಲ್ಲವನ್ನೂ ಸೇರಿಸಿ. = You teach to us.
ಮೇಲಿನ ನಿಯಮದ ಪ್ರಕಾರ ಇದು ತಪ್ಪು ವಾಕ್ಯ. ಏಕೆಂದರೆ, ಕ್ರಿಯಾಪದ teach ನ ನಂತರ ನೇರವಾಗಿ ಸರ್ವನಾಮ us
ಸೇರಿಸಿದರೆ us ಗೆ ‘ನ್ನು/ಗೆ’ ಸೇರಿಕೊಂಡು ‘ನಮಗೆ/ನಮ್ಮನ್ನು’ ಎಂದಾಗುವುದರಿಂದ to ಸೇರಿಸಬಾರದು.
ಆದ್ದರಿಂದ ಸರಿ ವಾಕ್ಯ = You teach to us. = You teach us.
ಇದನ್ನು -ನಮಗೆ ಇಂಗ್ಲೀಷ್ ಕಲಿಸಿ- ಎಂದಾಗಿಸಿದರೆ, ಇದರ ಅನುವಾದ = Teach us English ಎಂದಾಗುತ್ತದೆ.
ಆದರೆ teachನ ನಂತರ us ನ ಬದಲಿಗೆ English ನ್ನು ಸೇರಿಸಿದರೆ, > ಇಂಗ್ಲೀಷ್‍ನ್ನು ಕಲಿಸಿ ಎಂಬರ್ಥವಾಗುತ್ತದೆ.
ಈಗ -ನಮಗೆ- ಶಬ್ದಕ್ಕಾಗಿ ಪುನಃ to us ನ್ನು ಸೇರಿಸಬೇಕಾಗುತ್ತದೆ.
= Teach English to us./ Teach us English = ನಮಗೆ ಇಂಗ್ಲೀಷ್ ಕಲಿಸಿ.

ಇವೆರಡೂ ಸರಿಯಾದ ವಾಕ್ಯಗಳು. ಇವುಗಳಲ್ಲಿ ಯಾವುದನ್ನೂ ಬಳಸಬಹುದು.

ಇಂಗ್ಲೀಷ್ ಅನುವಾದವನ್ನು ಒಂದು ಕೈಯಲ್ಲಿ ಮುಚ್ಚಿಟ್ಟುಕೊಂಡು ಈ ಕೆಳಗಿನ ವಾಕ್ಯಗಳನ್ನು ಅನುವಾದಿಸಿ ಹಾಗೂ ನೀವೆಷ್ಟು ತಿಳಿದುಕೊಂಡಿದ್ದೀರೆಂಬುದನ್ನು ಪರೀಕ್ಷಿಸಿ.

1. ಇದನ್ನು ತಿನ್ನು. = Eat this.
2. ಅದನ್ನು ಅಡಗಿಸು. = Hide it.
3. ನನ್ನನ್ನು ಕ್ಷಮಿಸಿ.= Forgive me.
4. ನೋವನ್ನು ಸಹಿಸು. = Bear the pain
5. ಕಾರನ್ನು ಚಲಾಯಿಸು. = Drive the car.
6. ಸ್ವಲ್ಪ ನೀರನ್ನು ಕುಡಿ. = Drink some water.
7. ಅದನ್ನು ಅವನಿಗೆ ಕೊಡು. = Give it to him.
8. ಅವಳಿಗೆ ಬರಲು ಹೇಳು. = Tell her to come.
9. ಒಂದು ಪತ್ರವನ್ನು ಬರೆಯಿರಿ. = Write a letter.
10. ನಿನ್ನ ಪೆನ್ನನ್ನು ಕೊಡು. = Give your pen.
11. ಅವನ ಹೆಸರನ್ನು ಹೇಳು.= Say his name.
12. ಬಾಟಲಿಯನ್ನು ಅಲುಗಾಡಿಸು. = Shake the bottle.
13 .ನಾಳೆ ನನ್ನನ್ನು ಭೇಟಿಯಾಗು. = Meet me tomorrow.
14. ಅವಳನ್ನು ಅದರ ಬಗ್ಗೆ ಕೇಳು. = Ask her about it.
15. ಅವನನ್ನು ಇಲ್ಲಿಗೆ ಕರೆದುಕೊಂಡುಬನ್ನಿ. = Bring him here.
16. ನನ್ನನು ಸಿನಿಮಾಕ್ಕೆ ಕರೆದುಕೊಂಡುಹೋಗು. = Take me to cinema.
17.ಮಕ್ಕಳನ್ನು ಹೊರಗೆ ಕಳಿಸಿ. = Send the children out.
18.ಮರವನ್ನು ಹತ್ತು. = Climb the tree.
19.ಸ್ವಲ್ಪ ಚಹಾ ತಯಾರಿಸು. = Prepare some Tea.
20.ನನ್ನ ಪುಸ್ತಕ ನನಗೆ ಕೊಡು. = Give me my book./Give my book to me.
21.ಅವನ ಪೆನ್ ಅವನಿಗೆ ಕೊಡಿ. = Give him his pen./Give his pen to him.
22.ಅವಳ ಪೆನ್ ಅವಳಿಗೆ ಕೊಡು. = Give her her pen./Give her pen to her.
23.ನಮ್ಮ ಮನೆಯನ್ನು ಅವನಿಗೆ ತೋರಿಸು. = Show him our house.
24.ನಿಮ್ಮ ಮನೆಯನ್ನು ನಮಗೆ ತೋರಿಸಿ.= Show us your house.

(ಮುಂದುವರೆಯುವುದು)

Exit mobile version