ಪ್ರಿಯರೆ,
ಒಂದು Preposition ಕರ್ತೃಪದದೊಡನೆ ಇನ್ನೊಂದು ವ್ಯಕ್ತಿ/ವಸ್ತುವಿಗೆ ಇರುವ ಸಂಬಂಧ/ಸ್ಥಿತಿಯನ್ನು ತಿಳಿಸುತ್ತದೆ. ಒಂದು ವಾಕ್ಯದಲ್ಲಿ ಪ್ರತಿಯೊಂದು preposition ಒಂದೊಂದು ಸ್ಥಿತಿಯನ್ನ ತಿಳಿಸುವುದರಿಂದ ಇವುಗಳು ಹೆಚ್ಚು ಬಳಕೆಯಾದಷ್ಟೂ ಕರ್ತೃಪದದೊಡನೆ ಇತರ ವ್ಯಕ್ತಿ/ ವಸ್ತುಗಳಿಗಿರುವ ಸಂಬಂಧ ಹೆಚ್ಚಾಗಿ ವ್ಯಕ್ತವಾಗುತ್ತದೆ.
ಒಂದು ಕನ್ನಡ ವಾಕ್ಯದ ಕರ್ತೃಪದ + ಕೊನೆಯಪದಗಳು ಮೂಲವಾಕ್ಯವನ್ನು ಹೇಳುತ್ತವೆ. ಅವುಗಳನ್ನು ಬಿಟ್ಟರೆ ಉಳಿಯುವ prepositon, adjective, adverb ಇರುವ ಭಾಗವನ್ನು ಅನುವಾದಿಸಲು ಕಲಿಯೋಣ. ನೆನಪಿಡಿ, ಮೊದಲಿಗೆ ಇಂತಹಾ ಭಾಗಗಳಲ್ಲಿ ಕ್ರಿಯೆಗೆ ಸಂಬಂಧಿಸಿದ ಪದವನ್ನು ಮೊದಲಿಗೆ ಅನುವಾದಿಸಿ ಆನಂತರವೇ ಉಳಿದ ಭಾಗವನ್ನು ಅನುವಾದಿಸಬೇಕು.
ಉದಾ 1: – ನಾನು ಬೆಂಗಳೂರಿಗೆ ಹೋಗಲು ಬಯಸುತ್ತೇನೆ.
ಈ ವಾಕ್ಯದಲ್ಲಿನ ಮೂಲವಾಕ್ಯ = ಕರ್ತೃಪದ ನಾನು + ಕೊನೆಯಪದ -ಬಯಸುತ್ತೇನೆ-
ಇವುಗಳನ್ನು ತೆಗೆದುಹಾಕಿದರೆ ಉಳಿಯುವ ವಾಕ್ಯಭಾಗ = ಬೆಂಗಳೂರಿಗೆ ಹೋಗಲು- ಇದನ್ನು ಅನುವಾದಿಸೋಣ.
= ಹೋಗಲು (ಹೋಗು + ಲು = go + preposition ‘to’ = to go)
+ ಬೆಂಗಳೂರಿಗೆ (ಬೆಂಗಳೂರು + ಗೆ = Bengaluru + preposition ‘to’ = to Bengaluru)
= to go to Bengaluru = ಬೆಂಗಳೂರಿಗೆ ಹೋಗಲು
ಉದಾ 2: ನಾನು ಒಂದು ಹಾಡು ಹಾಡಲು ಬಯಸುತ್ತೇನೆ. = ನಾನು ಒಂದು ಹಾಡು ಹಾಡಲು ಬಯಸುತ್ತೇನೆ.
= ಒಂದು ಹಾಡು ಹಾಡಲು = ಮೊದಲಿಗೆ ಕ್ರಿಯಾಪದವಿರುವ ಭಾಗವನ್ನು ಅನುವಾದಿಸಿ ನಂತರ ಉಳಿದ ಭಾಗ ಸೇರಿಸಿ.
= ಹಾಡಲು = ಹಾಡು + ಲು = sing + preposition ‘to’ = to sing + ಒಂದು ಹಾಡು = a song)
= to sing a song = ಒಂದು ಹಾಡು ಹಾಡಲು
ಮೇಲೆ ಅನುವಾದಿಸಿದಂತೆಯೇ ಕೆಳಗಿನ ಪದ ಪುಂಜಗಳನ್ನು ಅನುವಾದಿಸಿ.
1. ದೆಹಲಿಯಿಂದ ಬರಲು = to come from Delhi
2. ಅದನ್ನು ಅಲ್ಲಿ ಇಡಲು = to keep it there
3. ಆವಳ ಜೊತೆ ಮಾತನಾಡಲು = to talk to her/ to speak with her
4. ನನ್ನ ಅಣ್ಣನ ಜೊತೆಯಲ್ಲಿ = with my brother
5. ನಿನ್ನ ಸಹಾಯವಿಲ್ಲದೆ = without your help
6. ಅದನ್ನು ಪೋಸ್ಟ್‍ನಲ್ಲಿ ಕಳುಹಿಸಲು = to send it by post
7. ಇಂಗ್ಲೀಷ್‍ನಲ್ಲಿ ಮಾತನಾಡಲು = to talk in English
8. ನಿನಗಾಗಿ ಅದನ್ನು ತರುವುದಕ್ಕಾಗಿ = for bringing it for you
9. ಆ ಅಂಗಡಿಯಿಂದ ಹಣ್ಣು ತರಲು = to bring fruits from that shop
10.ಈ ಪುಸ್ತಕವನ್ನು ಓದುವುದಕ್ಕಾಗಿ = for reading this book
ಈ ಪದಪುಂಜಗಳ ಮೊದಲಿಗೆ ಮೂಲವಾಕ್ಯ ‘ನಾನು ಬಯಸುತ್ತೇನೆ’ (I want) ಸೇರಿಸಿ ವಾಕ್ಯ ಸಂಪೂರ್ಣಗೊಳಿಸಿ. ಉದಾ:
ನಾನು ದೆಹಲಿಯಿಂದ ಬರಲು ಬಯಸುತ್ತೇನೆ. = I want to come from Delhi.
ನಾನು ಅದನ್ನು ಅಲ್ಲಿ ಇಡಲು ಬಯಸುತ್ತೇನೆ. = I want to keep it there.
ನಾನು ಅವಳ ಜೊತೆ ಮಾತನಾಡಲು ಬಯಸುತ್ತೇನೆ. = I want to talk to her.
ಇದರಂತೆಯೇ ನಿಮ್ಮದಾದ ಕೆಲವು ವಾಕ್ಯಗಳನ್ನು ರಚಿಸಿ ದಿನನಿತ್ಯದ ಜೀವನದಲ್ಲಿ ಬಳಸಿ.