#03 – Parts Of Speech / ಸಂಭಾಷಣೆಯ ಭಾಗಗಳು
ಇಂದಿನಿಂದ ‘ಸಂಭಾಷಣೆಯ ಭಾಗಗಳು / Parts of speech ಬಗ್ಗೆ ತಿಳಿಯೋಣ.
1. NOUN (ನೌನ್) ನಾಮಪದ : “ನಾಮಪದವೆಂದರೆ ಒಬ್ಬ ವ್ಯಕ್ತಿಯ, ಒಂದು ವಸ್ತುವಿನ, ಒಂದು ಜಾಗ/ ಪ್ರದೇಶದ, ಸಮೂಹದ ಹಾಗೂ ವಿಷಯದ ಹೆಸರನ್ನು ಸೂಚಿಸುವ ಶಬ್ದಗಳು’.
ಉದಾ:
Rama, book, people, friendship, Rajani, crowd, army, student, |
Delhi, Mysore, village, town, doctor, engineer etc. |
II. PRONOUN (ಪ್ರೋನೌನ್) ಸರ್ವನಾಮ :
‘ಒಂದು ನಾಮಪದವು ಪುನಃ ಪುನಃ ಬಳಕೆಯಾಗುವುದನ್ನು ತಪ್ಪಿಸಲು ಇರುವ ಶಬ್ದವೇ ಸರ್ವನಾಮ. ಉದಾ: ರಾಜು ಬಂದನು, ರಾಜು ಕುಳಿತನು, ರಾಜು ಕಾಫಿ ಕುಡಿದನು- ಹೀಗೆ ಪ್ರತೀ ವಾಕ್ಯದಲ್ಲಿ ನಾಮಪದ ‘ರಾಜು’ವನ್ನು ಬಳಸುವ ಬದಲು ಮೊದಲಿಗೆ ರಾಜು ಬಂದನು ಎಂದು ಹೇಳಿ ನಂತರ ಅವನು ಕುಳಿತನು, ಅವನು ಕಾಫಿ ಕುಡಿದನು – ಎಂದು ಹೇಳುತ್ತೇವಲ್ಲವೆ? ‘ರಾಜು’ ಬದಲಿಗೆ ಬಳಸಲಾದ ‘ಅವನು’ ಶಬ್ದವೇ ರಾಜು ಪದದ ಸರ್ವನಾಮ. ಇಂಗ್ಲೀಷ್ನ ಸರ್ವನಾಮಗಳು ಈ ಕೆಳಗಿನಂತಿವೆ.
I, me | (ಐ, ಮಿ) | ನಾನು |
my | (ಮೈ) | ನನ್ನ |
mine | (ಮೈನ್) | ನನ್ನದು |
myself | (ಮೈಸೆಲ್ಪ್) | ನಾನೇ |
You | (ಯೂ) | ನೀನು/ ನೀವು |
your | (ಯುವರ್) | ನಿನ್ನ/ ನಿಮ್ಮ |
yours | (ಯುವರ್ಸ್) | ನಿನ್ನದು/ ನಿಮ್ಮದು |
yourself | (ಯುವರ್ಸೆಲ್ಫ್) | ನೀನೇ/ ನೀವೇ |
We, us | (ವಿ, ಅಸ್) | ನಾವು |
our | (ಅವರ್) | ನಮ್ಮ |
ours | (ಅವರ್ಸ್) | ನಮ್ಮದು |
ourselves | (ಅವರ್ಸೆಲ್ವ್ಸ್) | ನಾವೇ |
They, them | (ದೆ, ದೆಮ್) | ಅವರು/ ಇವರು/ ಅವುಗಳು/ ಇವುಗಳು |
their | (ದೆಯರ್) | ಅವರ/ ಅವುಗಳ |
theirs | (ದೆಯರ್ಸ್) | ಅವರದ್ದು/ ಅವುಗಳದ್ದು |
themselves | (ದೆಮ್ಸೆಲ್ವ್ಸ್) | ಅವರೇ/ ಅವುಗಳೇ |
He, him | (ಹಿ, ಹಿಮ್) | ಅವನು/ ಇವನು |
his | (ಹಿಸ್) | ಅವನ/ ಇವನ/ ಅವನದ್ದು/ ಇವನದ್ದು |
himself | (ಹಿಮ್ಸೆಲ್ಫ್) | ಅವನೇ/ ಇವನೇ |
She, her | (ಶಿ, ಹರ್) | ಅವಳು/ ಇವಳು |
her | (ಹರ್) | ಅವಳ/ ಇವಳ |
hers | (ಹರ್ಸ್) | ಅವಳದ್ದು |
herself | (ಹರ್ಸೆಲ್ಫ್) | ಅವಳೇ |
It | (ಇಟ್) | ಅದು/ ಇದು |
its | (ಇಟ್ಸ್) | ಅದರ |
itself | ಇಟ್ಸೆಲ್ಫ್ | ಅದೇ/ ಇದೇ |
this | (ದಿಸ್) | ಇದು, ಈ |
that | (ದ್ಯಾಟ್) | ಅದು, ಆ |
these | (ದೀಸ್) | ಇವುಗಳು, ಈ |
those | (ದೋಸ್) | ಅವುಗಳು, ಆ |
(ಮುಂದುವರೆಯುವುದು)
Tag:Parts Of Speech
2 Comments
Thank u sir your Teaching is so good it’s easy to understand thank you so much
Thank you miss. Good luck.