#04 – PRONOUN / ಸರ್ವನಾಮ
ಮಿತ್ರರೆ,
ನಿನ್ನೆ ಕೊಡಲಾಗಿದ್ದ ಸರ್ವನಾಮಗಳ ಪಟ್ಟಿಯನ್ನು ಕಂಠಪಾಠ ಮಾಡಿಕೊಳ್ಳಿ. ಏಕೆಂದರೆ ದಿನ ನಿತ್ಯ ಮಾತನಾಡುವಾಗ ‘ಅವನು/ಅವನ/ಅವನೇ’ ಇತ್ಯಾದಿ ಶಬ್ದಗಳನ್ನು ಸರಿಯಾಗಿ ಬಳಸಿದರೆ ಮಾತ್ರ ನಮ್ಮ ಮಾತಿಗೊಂದು ಬೆಲೆ ಇರುತ್ತದೆ. ಇನ್ನು ಈ ಸರ್ವನಾಮಗಳ ಬಗೆಗಿನ ವಿವರಣೆ ಈ ಕೆಳಗಿದೆ. ಇದನ್ನು ಮನದಟ್ಟು ಮಾಡಿಕೊಂಡಿರಿ.
1. ನಿನ್ನೆ ಹೇಳಿದ ಸರ್ವನಾಮಗಳಲ್ಲಿ I, we, you, they, he, she, it ಗಳು ವಾಕ್ಯದಲ್ಲಿ ಕರ್ತೃಪದವಾಗಿ ಬಳಕೆಯಾಗುತ್ತವೆ. ಉದಾ:
a. I am reading. (ನಾನು ಓದುತ್ತಿದ್ದೇನೆ.)
b. Raju is playing / He is playing. (ರಾಜು ಆಡುತ್ತಿದ್ದಾನೆ / ಅವನು ಆಡುತ್ತಿದ್ದಾನೆ)
c. My friends are there / They are there. (ನನ್ನ ಗೆಳೆಯರು ಅಲ್ಲಿದ್ದಾರೆ / ಅವರು ಅಲ್ಲಿದ್ದಾರೆ)
2. ವಾಕ್ಯದ ಮಧ್ಯದಲ್ಲಿ ಅಂದರೆ verb / preposition ಗಳ ಜೊತೆಯಲ್ಲಿ ಬಳಸಬೇಕಾದಾಗ ಇವುಗಳ ಇನ್ನೊಂದು ರೂಪವಾದ objective pronoun ಅಂದರೆ me, us, you, them, him, her, it ನ್ನು ಬಳಸಲಾಗುತ್ತದೆ. ಉದಾ
a. Give He him his book. (ಅವನ ಪುಸ್ತಕ ಅವನಿಗೆ ಕೊಡು)
b. Take she her to her house. (ಅವಳನ್ನು ಅವಳ ಮನೆಗೆ ಕರೆದುಕೊಂಡು ಹೋಗಿ)
c. I go with they them. (ನಾನು ಅವರ ಜೊತೆ ಹೋಗುತ್ತೇನೆ,)
3. my, our, your, their, his, her ಗಳ ನಂತರ ಒಂದು ನಾಮಪದವಿದ್ದೇ ಇರುತ್ತದೆ, ಇರದಿದ್ದರೆ ಈ ಶಬ್ದಗಳಿಗೆ ಅಸ್ತಿತ್ವ/ ಅರ್ಥವೇ ಇರುವುದಿಲ್ಲ, ಉದಾ: my = ನನ್ನ = ನನ್ನ ಏನು? ಈ ‘ಏನು’ ಎಂದು ಹೇಳುವ ಶಬ್ದ ಸೇರಿಸಿದಾಗ ಅಂದರೆ ‘ನನ್ನ’ ದ ನಂತರ ಒಂದು ನಾಮಪದ- ಪೆನ್/ ಪುಸ್ತಕ ಇದ್ದಾಗ ಮಾತ್ರ ನನ್ನ’ ಪದಕ್ಕೆ ಅಸ್ತಿತ್ವ ದೊರೆಯುತ್ತದೆ. = ನನ್ನ ಪೆನ್/ ನನ್ನ ಪುಸ್ತಕ ಇತ್ಯಾದಿ. ಇತರ ಉದಾಹರಣೆಗಳು:
our house = ನಮ್ಮ ಮನೆ | her pen = ಅವಳ ಪೆನ್ |
his friend = ಅವನ ಗೆಳೆಯ | their bags = ಅವರ ಚೀಲಗಳು |
3. This ನ್ನು -ಇದು- ಹಾಗೂ -ಈ- ಎಂಬ ಎರಡು ಪದಗಳಿಗಾಗಿ ಉಪಯೋಗಿಸಲಾಗುತ್ತದೆ. ಉದಾ:
This is a book. = ಇದು ಒಂದು ಪುಸ್ತಕ.
This book is good. = ಈ ಪುಸ್ತಕ ಚೆನ್ನಾಗಿದೆ.
ಅಂತೆಯೇ that ನ್ನು -ಆದು- ಹಾಗೂ -ಆ- ಶಬ್ದಗಳಿಗಾಗಿ ಬಳಸಲಾಗುತ್ತದೆ. ಉದಾ:
That is a tree. = ಅದು ಒಂದು ಮರ. That tree is old.= ಆ ಮರ ಹಳೆಯದು.
ಅಂದರೆ, ಒಬ್ಬ ವ್ಯಕ್ರಿ/ ವಸ್ತು ಇದ್ದಾಗ ಅದು/ ಆ ಪದಕ್ಕಾಗಿ that’ನ್ನೂ, ಇದು/ ಈ ಪದಕ್ಕಾಗಿ this’ನ್ನೂ ಬಳಸಬೇಕು. ಒಂದಕ್ಕಿಂತ ಹೆಚ್ಚಿದ್ದಾಗ ಇವುಗಳು/ ಈ ಪದಕ್ಕಾಗಿ these ನ್ನೂ, ಅವುಗಳು/ ಆ ಪದಕ್ಕಾಗಿ those ನ್ನೂ ಬಳಸಬೇಕು.
ಉದಾ:
These are books. = | ಇವುಗಳು ಪುಸ್ತಕಗಳು. |
These books are old. = | ಈ ಪುಸ್ತಕಗಳು ಹಳೆಯವು. |
Those are students. = | ಅವರು ವಿದ್ಯಾರ್ಥಿಗಳು. |
Those students are playing. = | ಆ ವಿದ್ಯಾರ್ಥಿಗಳು ಆಡುತ್ತಿದ್ದಾರೆ. |
(ಮುಂದುವರೆಯುವುದು)
Tag:PRONOUN
1 Comment
I want next Post