#28 Am/Are Part 6
ಪ್ರಿಯರೆ,
Am/are ಗೆ ing ಸೇರಿದ ಕ್ರಿಯಾಪದವನ್ನು ಸೇರಿಸಿ ವರ್ತಮಾನಕಾಲದಲ್ಲಿ ನಡೆಯುತ್ತಾ ಇರುವ ಕ್ರಿಯೆಗಳನ್ನು ಹೇಳುವ ವಾಕ್ಯಗಳನ್ನು ರಚಿಸಿದಿರಿ, ಈ ವಾಕ್ಯಗಳನ್ನು ನಕಾರಾತ್ಮಕವಾಗಿಸಲು ಗೆ ಸೇರಿಸಬೇಕು. ಈ ವಾಕ್ಯಗಳು ‘ಇಲ್ಲ’ ಪದದಿಂದ ಕೊನೆಯಾಗಿರುತ್ತವೆ.
ಉದಾ:
- I am not reading. = ನಾನು ಓದುತ್ತಿಲ್ಲ (ಓದುತ್ತಾ + ಇಲ್ಲ)
- They are not reading.= ಅವರು ಓದುತ್ತಿಲ್ಲ.
ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.
- ನಾನು ಅಲ್ಲಿಗೆ ಹೋಗ್ತಾ ಇಲ್ಲ. = I am not going there.
- ನಾನು ಅವರಿಗಾಗಿ ಕಾಯುತ್ತಿಲ್ಲ. = I am not waiting for them.
- ನಾನು ಸುಳ್ಳು ಹೇಳುತ್ತಿಲ್ಲ. = I am not lying.
- ನಾನು ತರಕಾರಿಗಳನ್ನು ಕೊಳ್ಳುತ್ತಿಲ್ಲ. = I am not buying vegetables.
- ನಾನು ಅವನ ಬಗ್ಗೆ ಯೋಚಿಸುತ್ತಿಲ್ಲ. = I am not thinking about him.
- ಅವರು ಸರಿಯಾಗಿ ಆಡುತ್ತಿಲ್ಲ. = They are not playing well.
- ನಾವು ಇಲ್ಲಿ ತಮಾಷೆಗಾಗಿ ನಿಂತುಕೊಂಡಿಲ್ಲ. =We are not standing here for fun.
- ಅವರು ಅದನ್ನು ನನಗಾಗಿ ತರುತ್ತಾ ಇಲ್ಲ. = They are not bringing it for me.
- ಈ ಪೆನ್ಗಳು ಸರಿಯಾಗಿ ಬರೆಯುತ್ತಿಲ್ಲ. = These pens are not writing freely.
- ವಿದ್ಯಾರ್ಥಿಗಳು ಕ್ಲಾಸಿಗೆ ಸರಿಯಾಗಿ ಬರ್ತಾ ಇಲ್ಲ. = Students are not coming to class regularly.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ.
2. ಅವರು ಅಲ್ಲಿ ಯಾವ ಕೆಲಸವನ್ನೂ ಮಾಡುತ್ತಿಲ್ಲ.
3. ನಾವು ಅವನ ಬಗ್ಗೆ ಮಾತನಾಡುತ್ತಿಲ್ಲ.
4. ನಾವು ಹೊಡೆದಾಡುತ್ತಿಲ್ಲ, ಕರಾಟೆ ಅಭ್ಯಾಸ ಮಾಡುತ್ತಿದ್ದೇವೆ.
5. ಅವರು ನಮ್ಮೊಡನೆ ಆಟವಾಡುತ್ತಿಲ್ಲ, ಸುಮ್ಮನೆ ನೋಡುತ್ತಿದ್ದಾರೆ.
(ಮುಂದುವರೆಯುವುದು)
Tag:Am / Are Part 6