#26 Am/Are Part 4
ಪ್ರಿಯರೆ,
ಹಿಂದಿನ ವಾರದ ಪ್ರಶ್ನೆಗಳ ಉತ್ತರ:
- Are you my brother’s classmate?/Are you the classmate of my brother?
- Are the mangoes sweet?
- Are your friends hungry?
- Are you with her?
- Are you at home or office now?
Am/are ಗೆ ing ಸೇರಿದ ಕ್ರಿಯಾಪದವನ್ನು ಸೇರಿಸಿ ವರ್ತಮಾನಕಾಲದಲ್ಲಿ ನಡೆಯುತ್ತಾ ಇರುವ ಕ್ರಿಯೆಗಳನ್ನು ಹೇಳುವ ವಾಕ್ಯಗಳನ್ನು ರಚಿಸಲು ಕಲಿತಿರಿ, ಇಂದು ಈ ವಾಕ್ಯಗಳ ಪ್ರಶ್ನಾಸೂಚಕ ರೂಪವನ್ನು ಅಭ್ಯಸಿಸೋಣ.
ಪ್ರಶ್ನಾಸೂಚಕ ವಾಕ್ಯಗಳಿಗಾಗಿ am/are ನ್ನು ವಾಕ್ಯದ ಆರಂಭದಲ್ಲಿ ಹೇಳಬೇಕು. ಉದಾ:
I am playig well. > Am I playing well? = ನಾನು ಚೆನ್ನಾಗಿ ಆಡುತ್ತಿದ್ದೇನೆಯೆ?
They are playing well > Are they playing well? = ಅವರು ಚೆನ್ನಾಗಿ ಆಡುತ್ತಿದ್ದಾರೆಯೆ?
ಉದಾಹರಣೆಗಳನ್ನು ಅಭ್ಯಸಿಸಿ.
1. ಹುಡುಗರು ಚೆನ್ನಾಗಿ ಕಲಿಯುತ್ತಿದ್ದಾರೆಯೆ? = Are the boys playing well?
2. ನಾನು ನಿಮ್ಮ ಸಮಯ ಹಾಳುಮಾಡುತ್ತಿದ್ದೇನೆಯೆ? = Am I wasting your time?
3. ಅವರು ನಿನಗಾಗಿ ಕಾಯುತ್ತಿದ್ದಾರೆಯೆ? = Are they waiting for you?
4. ನೀವು ದನದ ಹಾಲು ಕರೆಯುತ್ತಿದ್ದೀರಾ? = Are you milking the cow?
5. ಎಲ್ಲಾ ದೀಪಗಳು ಉರಿಯುತ್ತಿವೆಯೆ? = Are all the lamps burning?
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ನೀವು ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೀರಾ?
2. ನೀವು ಊಟ ಮಾಡುತ್ತಿದ್ದೀರಾ?
3. ನೀವು ನಾಳೆ ಬರುವವರೆ?
4. ಅವರು ನಿಜ ನುಡಿಯುತ್ತಿದ್ದಾರೆಯೆ?
5. ನಾನು ಸುಂದರವಾಗಿ ಕಾಣುತ್ತಿದ್ದೇನೆಯೆ?
(ಮುಂದುವರೆಯುವುದು)
Tag:Am/Are, Am/Are Part 4