#27 Am/Are Part 5
ಪ್ರಿಯರೆ,
ಕಳೆದ ವಾರದ ಪ್ರಶ್ನೆಗಳ ಉತ್ತರ:
1. Are you working in this school?
2. Are you having/taking meals?
3. Are you coming tomorrow?
4. Are they telling truth?
5. Am I looking smart?
I AM NOT/ WE/YOU/THEY ARE NOT = ಇಲ್ಲ / ಅಲ್ಲ
I am not + noun/adjective/adverb ಅಥವಾ you/we/they are not + noun/adjective/adverb ನಿಂದ ನಕಾರಾತ್ಮಕ ವಾಕ್ಯಗಳನ್ನು ರಚಿಸಬಹುದು. ಈ ವಾಕ್ಯಗಳ ಕೊನೆಯ ಪದ ಅಲ್ಲ/ಇಲ್ಲ ಎಂದಿರುತ್ತದೆ. ಉದಾ:
- ನಾನು ರಾಜು ಅಲ್ಲ. = I am not Raju.
- ನಾನು ಅವನ ಗೆಳೆಯನಲ್ಲ. = I am not his friend.
- ನಾವು ಈ ಶಾಲೆಯ ವಿದ್ಯಾರ್ಥಿಗಳಲ್ಲ. = We are not the students of this school.
- ಅವರಿನ್ನೂ ತಯಾರಾಗಿಲ್ಲ. = They are not ready yet.
- ನಿನ್ನ ಪುಸ್ತಕಗಳು ಇಲ್ಲಿಲ್ಲ. = Your books are not here.
ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.
- ನಾನು ರಾಮರಾಯರ ಮಗನಲ್ಲ. = I am not the son of Mr Rama Rao.
- ನಾನು ಇಂಗ್ಲೀಷಿನಲ್ಲಿ ಅಷ್ಟೊಂದು ಚೆನ್ನಾಗಿಲ್ಲ. = I am not so good at English.
- ನನಗೆ ನಿನ್ನ ಮೇಲೆ ಸಿಟ್ಟಿಲ್ಲ. = I’m not angry with you.
- ನಾನು ಈಗ ಮನೆಯಲ್ಲಿಲ್ಲ. = I am not at home now.
- ನಾನು ನಿನ್ನ ಜೊತೆ ಬರಲು ತಯಾರಿಲ್ಲ. = I am not ready to come with you.
- ಅವರೀಗ ಅವರ ಹಳೆಯ ಮನೆಯಲ್ಲಿಲ್ಲ. = They are not in their old house now.
- ನನ್ನ ಗೆಳೆಯರು ಶ್ರೀಮಂತರಲ್ಲ. = My friends are not rich.
- ನಾವು ಈ ಸಂಸ್ಥೆಯ ಕಾರ್ಮಿಕರಲ್ಲ. = We are not the workers of this company.
- ಆ ಪುಸ್ತಕಗಳು ನನ್ನ ಚೀಲದಲ್ಲಿಲ್ಲ. = Those books are not in my bag.
- ಅವರು ನಮ್ಮ ಜೊತೆಯಲ್ಲಿಲ್ಲ. = They are not with us.
(ಮುಂದುವರೆಯುವುದು)