#24 Am/Are Part 2
ಪ್ರಿಯರೆ,
ಕಳೆದ ವಾರದ ಪ್ರಶ್ನೆಗಳಿಗೆ ಉತ್ತರ:
- We are in the temple now.
- Books are in my bag.
- They are very rich.
- These fruits are good.
- They are with me.
‘ing’ ಒಂದು ವರ್ತಮಾನಕಾಲದ ಕ್ರಿಯಾಪದಕ್ಕೆ …’ತ್ತಾ’ ಪ್ರತ್ಯಯವನ್ನು ಸೇರಿಸುತ್ತದೆ.
ಉದಾ: go + ing = going = ಹೋಗುತ್ತಾ ; coming = ಬರುತ್ತಾ ; working = ಕೆಲಸ ಮಾಡುತ್ತಾ
I am ಗೆ ing ಸೇರಿದ ಕ್ರಿಯಾಪದವನ್ನು ಸೇರಿಸಿದರೆ ವರ್ತಮಾನಕಾಲದಲ್ಲಿ ನಾನು ಮಾಡುತ್ತಾ ಇರುವ ಕ್ರಿಯೆಗಳನ್ನು ಹೇಳುವ ಅಪೂರ್ಣ ವರ್ತಮಾನ ಕಾಲದ ( Present Continuous Tense) ವಾಕ್ಯಗಳನ್ನು ರಚಿಸಬಹುದು. ಉದಾ:
- I am going. = ನಾನು ಹೋಗುತ್ತಾ ಇದ್ದೇನೆ / ಹೋಗುತ್ತಿದ್ದೇನೆ.
- I am working. = ನಾನು ಕೆಲಸಮಾಡುತ್ತಾ ಇದ್ದೇನೆ. / ಕೆಲಸ ಮಾಡುತ್ತಿದ್ದೇನೆ.
- I am playing. = ನಾನು ಆಡುತ್ತಾ ಇದ್ದೇನೆ./ ಆಡುತ್ತಿದ್ದೇನೆ.
ಇದೇ ರೀತಿ You/We/They ಗಳೊಡನೆ are ನ ನಂತರ ing ಸೇರಿದ ವರ್ತಮಾನಕಾಲದ ಕ್ರಿಯಾಪದವನ್ನು ಸೇರಿಸಿ ವಾಕ್ಯ ರಚಿಸಬಹುದು. ಉದಾ:
- You are going. = ನೀವು ಹೋಗುತ್ತಿದ್ದೀರಿ. (ಹೋಗುತ್ತಾ ಇದ್ದೀರಿ)
- We are coming. = ನಾವು ಬರುತ್ತಿದ್ದೇವೆ. (ಬರುತ್ತಾ ಇದ್ದೇವೆ)
- They are working.= ಅವರು ಕೆಲಸಮಾಡುತ್ತಿದ್ದಾರೆ. (ಕೆಲಸಮಾಡುತ್ತಾ ಇದ್ದಾರೆ)
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
- ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. = I am going to Bengaluru.
- ನಾನೊಂದು ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದೇನೆ. = I am working in a company.
- ನಾನು ಗೆಳೆಯರೊಡನೆ ಆಡುತ್ತಿದ್ದೇನೆ. = I am playing with my friends.
- ನಾನೊಂದು ಕಥೆ ಓದುತ್ತಿದ್ದೇನೆ. = I am reading a story.
- ನಾನು ನಿಮಗಾಗಿ ಕಾಯುತ್ತಿದ್ದೇನೆ. = I’m waiting for you.
- ನಾವು ಬಸ್ ಸ್ಟ್ಯಾಂಡಿನಲ್ಲಿ ನಿಂತುಕೊಂಡಿದ್ದೇವೆ. = We are standing at the bus stand.
- ನಾವು ನಮ್ಮ ಕೈಗಳನ್ನು ತೊಳೆಯುತ್ತಿದ್ದೇವೆ. = We are washing our hands.
- ಅವರು ನಮ್ಮನ್ನು ಕರೆಯುತ್ತಿದ್ದಾರೆ. = They are calling us.
- ನೀನು ನನ್ನ ಸಮಯ ಹಾಳು ಮಾಡುತ್ತಿದ್ದೀ. = You are wasting my time.
- ದನಗಳು ಹುಲ್ಲು ಮೇಯುತ್ತಿವೆ. = Cows are grazing.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ:
1. ನಾನು ಅವಳ ಬಗ್ಗೆ ಯೋಚಿಸುತ್ತಿದ್ದೇನೆ.
2. ನಾನು ನನ್ನ ಪೆನ್ ಹುಡುಕುತ್ತಿದ್ದೇನೆ.
3. ಅವರು ಬಸ್ನಲ್ಲಿ ಹೋಗುತ್ತಿದ್ದಾರೆ.
4. ಕಾಗೆಗಳು ಕೂಗುತ್ತಿವೆ.
5. ಬಸ್ಗಳು ವೇಗವಾಗಿ ಹೋಗುತ್ತಿವೆ.
(ಮುಂದುವರೆಯುವುದು)
Tag:Am/Are, Am/Are Part 2