16 – Do
ಪ್ರಿಯರೆ,
DO | 1st form verb | |
I | … ತ್ತೇನೆ | go |
WE | … ತ್ತೇವೆ | come |
They | … ತ್ತಾರೆ/ತ್ತವೆ | play |
Do ಸಹಾಯಕ ಕ್ರಿಯಾಪದವಾಗಿ ಬಳಸಲ್ಪಡುವ ಒಂದು ಕ್ರಿಯಾಪದ. I / We / They ಗೆ do ಮತ್ತು ವರ್ತಮಾನ ಕಾಲದ ಕ್ರಿಯಾಪದಗಳನ್ನು (Verb in Present tense/1st form verbs) ಸೇರಿಸಿದರೆ I ಯಿಚಿದ ಆರಂಭವಾದ ವಾಕ್ಯದ ಕೊನೆಯಲ್ಲಿ ..ತ್ತೇನೆ/ವೆನು, We ಯಿಂದ ಆರಂಭವಾದ ವಾಕ್ಯದ ಕೊನೆಯಲ್ಲಿ ..ತ್ತೇವೆ/ವೆವು ಹಾಗೂ They ಯಿಂದ ಆರಂಭವಾದ ವಾಕ್ಯದ ಕೊನೆಯಲ್ಲಿ ..ತ್ತಾರೆ/ವರು -ಪ್ರತ್ಯಯಗಳು ಸೇರಿಕೊಳ್ಳುತ್ತವೆ. ಇಂತಹ ವಾಕ್ಯಗಳನ್ನು ಸಾಮಾನ್ಯ ವರ್ತಮಾನ ಕಾಲದ ವಾಕ್ಯ (Simple Present tense) ಎಂದು ಕರೆಯಲಾಗುತ್ತದೆ.
I/We/They ಗಳಿಗೆ do ನ ನಂತರ ವರ್ತಮಾನ ಕಾಲದ ಕ್ರಿಯಾಪದಗಳನ್ನು ಮಾತ್ರ ಸೇರಿಸಬಹುದು, ಭೂತಕಾಲ ಅಥವಾ ಭೂತಕೃದ್ವಾಚಕ ಕಾಲದ ಕ್ರಿಯಾಪದಗಳು ಸೇರಿಸುವುದು ತಪ್ಪು. ಇಲ್ಲಿ do ವಾಕ್ಯದ ಮಧ್ಯದಲ್ಲಿದ್ದರೂ, ತ್ತೇನೆ/ವೆನು ಪ್ರತ್ಯಯವನ್ನು ಅದರ ನಂತರ ಇರುವ ಕ್ರಿಯಾಪದಕ್ಕೆ ಸೇರಿಸುತ್ತದೆ. ಉದಾ:
I + do + go = ನಾನು + ತ್ತೇನೆ/ವೆನು + ಹೋಗು = ನಾನು ಹೋಗುತ್ತೇನೆ/ಹೋಗುವೆನು.
We + do + come = ನಾವು + ತ್ತೇವೆ + ಬರು = ನಾವು ಬರುತ್ತೇವೆ.
They + do + work = ಅವರು + ತ್ತಾರೆ + ಕೆಲಸ ಮಾಡು = ಅವರು ಕೆಲಸ ಮಾಡುತ್ತಾರೆ.
ಗಮನಿಸಿ, ಸಾಮಾನ್ಯವಾಗಿ ಮಾತನಾಡುವಾಗ I/We/They ಗಳ ನಂತರ ಸಹಾಯಕ ಕ್ರಿಯಾಪದ doವನ್ನು ಹೇಳದೆ ವರ್ತಮಾನ ಕಾಲದ ಕ್ರಿಯಾಪದವನ್ನು ಮಾತ್ರ ಹೇಳಿ ವಾಕ್ಯ ರಚಿಸಲಾಗುತ್ತದೆ. ಅಂದರೆ I do come ಬದಲಿಗೆ I come; We do work ಬದಲಿಗೆ We work. ಹೀಗೆ ಹೇಳಿದರೂ ಕೂಡಾ I ಮತ್ತು come ನ ನಡುವೆ do ಅವ್ಯಕ್ತವಾಗಿ ಇದೆ ಎಂದರ್ಥ. ಈ ನಿಯಮ do ಜೊತೆ ಬಳಸುವ ಎಲ್ಲಾ noun/pronoun ಗಳಿಗೆ ಅನ್ವಯಿಸುತ್ತದೆ. ಮತ್ತು do ವನ್ನು ಹೀಗೆ ಮರೆಯಾಗಿಸಿ ಹೇಳುವುದರ ಮೂಲಕ ನೀವು ಇಂಗ್ಲೀಷ್ ಭಾಷೆಗೆ ಹೊಸಬರಲ್ಲ ಎಂದೂ ನಿಮ್ಮ ಮಾತನ್ನು ಕೇಳಿದವರು ತಿಳಿಯುತ್ತಾರೆ. ಉದಾಹರಣೆಗೆ,
1. ನಾನು ಕೆಲಸ ಮಾಡುತ್ತೇನೆ. = I do work > I work.
2. ಅವರು ಮಾತನಾಡುತ್ತಾರೆ. = They do speak > They speak.
3. ನಾವು ಬರುತ್ತೇವೆ. = We do come > We come.
I/We/They + do + Verb ನಿಂದಾದ ಮೂಲವಾಕ್ಯಗಳನ್ನು ಉದ್ದವಾಗಿಸಲು preposition ಗಳು ಸಹಾಯಮಾಡುತ್ತವೆ.
1. ನಾನು ಹೋಗುತ್ತೇನೆ. I (do) go.
2. ನಾನು ‘ಹಳ್ಳಿಗೆ’ ಹೋಗುತ್ತೇನೆ. I go ‘to village’.
3. ನಾನು ಹಳ್ಳಿಗೆ ‘ಬಸ್ಸಿನಲ್ಲಿ’ ಹೋಗುತ್ತೇನೆ. I go to village ‘by bus’.
4. ನಾನು ‘ಹಣ್ಣು ತರಲು’ ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತೇನೆ. I go to village by bus to ‘bring fruits’.
5. ನಾನು ‘ನನ್ನ ತಂದೆಗಾಗಿ’ ಹಣ್ಣು ತರಲು ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತೇನೆ. I go to village by bus to bring fruits ‘for my father’.
6. ನಾನು ‘ನಾಳೆ’ ನನ್ನ ತಂದೆಗಾಗಿ ಹಣ್ಣು ತರಲು ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತೇನೆ. I go to village by bus to bring fruits for my father ‘tomorrow’.
7. ನಾನು ನಾಳೆ ‘ಬೆಳಿಗ್ಗೆ’ ನನ್ನ ತಂದೆಗಾಗಿ ಹಣ್ಣು ತರಲು ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತೇನೆ. I go to village by bus to bring fruits for my father tomorrow ‘morning’.
8. ನಾನು ನಾಳೆ ಬೆಳಿಗ್ಗೆ ‘9 ಘಂಟೆಗೆ’ ನನ್ನ ತಂದೆಗಾಗಿ ಹಣ್ಣು ತರಲು ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತೇನೆ. I go to village by bus to bring fruits for my father by ‘9 o’clock’ tomorrow morning.
ಮೇಲಿನ ವಾಕ್ಯಗಳಲ್ಲಿ ‘ನಾನು ಹೋಗುತ್ತೇನೆ’ ಎಂಬ ಮೂಲವಾಕ್ಯಕ್ಕೆ ಬೇರೆ ಬೇರೆ preposition, adverb ಗಳು ಉದಾ: ಹಳ್ಳಿಗೆ, ಬಸ್ಸಿನಲ್ಲಿ, ಹಣ್ಣು ತರಲು, ತಂದೆಗಾಗಿ, ನಾಳೆ ಬೆಳಿಗ್ಗೆ, 9 ಘಂಟೆಗೆ…ಇತ್ಯಾದಿ ಸೇರಿದಂತೆ ವಾಕ್ಯ ಉದ್ದವಾಗುತ್ತಾ ಹೋಗಿದೆ. ಆದುದರಿಂದ ಮೂಲ ವಾಕ್ಯದ ರಚನೆ ಹಾಗೂ ಇದಕ್ಕೆ ಬೇರೆ ಬೇರೆ ಸಂಬಂಧ/ಸ್ಥಿತಿಗಳನ್ನು ಸೇರಿಸಲು ಸಹಾಯ ಮಾಡುವ preposition ಹಾಗೂ adverb ಗಳ ಬಳಕೆಯನ್ನು ಸರಿಯಾಗಿ ತಿಳಿದುಕೊಂಡಿದ್ದರೆ, ಅವುಗಳನ್ನು ಸೇರಿಸುವುದರ ಮೂಲಕ ಎಷ್ಟು ಉದ್ದವಾದ ವಾಕ್ಯಗಳನ್ನು ಬೇಕಾದರೂ ರಚಿಸಲು ಸಾಧ್ಯವಾಗುತ್ತದೆ. ಇದರೊಡನೆ ಅನುವಾದದ ನಿಯಮದಲ್ಲಿ ಹೇಳಿರುವಂತೆ ಯಾವತ್ತೂ ಕನ್ನಡ ವಾಕ್ಯದ ಕರ್ತೃಪದ ಮತ್ತು ಕೊನೆಯಪದವನ್ನು ಮೊದಲಿಗೆ ಏಕೆ ಅನುವಾದಿಸಬೇಕೆಂಬುದನ್ನು ಮೇಲಿನ ವಾಕ್ಯಗಳಿಂದ ಅರ್ಥಮಾಡಿಕೊಳ್ಳಿ.
ಕೆಳಗಿನ ವಾಕ್ಯಗಳನ್ನು ಅಭ್ಯಸಿಸಿ.
1. ನಾನು ಬೆಳಿಗ್ಗೆ 6 ಘಂಟೆಗೆ ಏಳುತ್ತೇನೆ. = I get up at 6 in the morning.
2. ನಾನು ಗೆಳೆಯರೊಡನೆ ಕ್ರಿಕೆಟ್ ಆಡುತ್ತೇನೆ. = I play cricket with my friends.
3. ಅವರು ನಾಳೆ ಮೈಸೂರಿನಿಂದ ಬರುತ್ತಾರೆ. = They come from Mysore tomorrow.
4. ನಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ. = I work in ABC bank.
5. ನಾನು ಶಾಲೆಯಿಂದ 5 ಘಂಟೆಗೆ ವಾಪಸ್ ಬರುತ್ತೇನೆ. = I return from school at 5.
6. ನಾನು ನಿಮಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತೇನೆ. = I wait for you in the bus-stand.
(ಮುಂದುವರೆಯುವುದು)
Tag:Do