#18 – Do_Part 3
ಪ್ರಿಯರೆ, ಇಂದು ಸಹಾಯಕ ಕ್ರಿಯಾಪದ ನಿಂದ ನಕಾರಾತ್ಮಕ ವಾಕ್ಯಗಳ ರಚನೆ ಹೇಗೆ ಮಾಡುವುದೆಂದು ತಿಳಿಯೋಣ.
I/We/ They + ಸಹಾಯಕ ಕ್ರಿಯಾಪದ do ನಿಂದ ರಚಿಸಲಾದ ಒಂದು ವಾಕ್ಯದ ಕೊನೆಯಲ್ಲಿ ನಕಾರಾತ್ಮಕ ಪ್ರತ್ಯಯವಾದ ..ವುದಿಲ್ಲ’ ಸೇರಿಸಲು ಸಹಾಯಕ ಕ್ರಿಯಾಪದ do ಗೆ not ಸೇರಿಸಬೇಕು. ಅಂದರೆ,
- ನಾನು ಹೋಗುವುದಿಲ್ಲ. =I do not go.
- ನಾವು ಬರುವುದಿಲ್ಲ. = We do not come.
- ಅವರು ಆಡುವುದಿಲ್ಲ. = They do not play.
ಗಮನಿಸಿ, ವಾಕ್ಯ ಸಕಾರಾತ್ಮಕವಾಗಿರಲಿ ಯಾ ನಕಾರಾತ್ಮಕವಾಗಿರಲಿ, ಅನುವಾದದ ನಿಯಮ ಬದಲಾಗುವುದಿಲ್ಲ. ಉದಾ:
ನಾನು ನಾಳೆ ಶಾಲೆಗೆ ಹೋಗುವುದಿಲ್ಲ.
ಮೊದಲಿಗೆ ಈ ವಾಕ್ಯದಲ್ಲಿನ ಕರ್ತೃಪದ = ನಾನು / I
ವಾಕ್ಯದ ಕೊನೆಯ ಪದ = ಹೋಗು+ವುದಿಲ್ಲ /go + do not
ವಾಕ್ಯದಲ್ಲಿ ಉಳಿದ ಪದ = ಶಾಲೆಗೆ, ನಾಳೆ / to school, tomorrow
ಎಲ್ಲವನ್ನೂ ಸೇರಿಸಿ. = I do not go to school tomorrow.
ನಕಾರಾತ್ಮಕ ವಾಕ್ಯಗಳಲ್ಲಿ ಹೆಚ್ಚಿನ ಕ್ರಿಯಾಪದಗಳು ..ವುದಿಲ್ಲ’ ಪ್ರತ್ಯಯ ಸೇರಿಸಿಕೊಂಡರೆ, know, want, have ಗಳು ಬೇರೆಯೇ ಅರ್ಥ ಕೊಡುತ್ತವೆ. ಉದಾ:
- I do not have. = ನನ್ನ ಹತ್ತಿರ ಇಲ್ಲ/ ನಾನು ಹೊಂದಿಲ್ಲ.
- We do not know. = ನಮಗೆ ಗೊತ್ತಿಲ್ಲ / ತಿಳಿದಿಲ್ಲ.
- They do not want. = ಅವರಿಗೆ ಬೇಡ/ ಅವರು ಬಯಸುವುದಿಲ್ಲ.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
- ನನಗೆ ಇಂಗ್ಲಿಷ್ ಗೊತ್ತಿಲ್ಲ.. = I don’t know English.
- ನಾನು ಅಲ್ಲಿ ಕೆಲಸ ಮಾಡುವುದಿಲ್ಲ. = I don’t work there.
- ನಮಗೆ ಅವರ ಹೆಸರು ಗೊತ್ತಿಲ್ಲ. = We don’t know his name.
- ಈ ದನಗಳು ಹಾಲು ಕೊಡುವುದಿಲ್ಲ. = These cows don’t give milk.
- ನಾನು ನಿನಗಾಗಿ ಬಹಳಹೊತ್ತು ಕಾಯುವುದಿಲ್ಲ. = I don’t wait for you for* a long time.
- ನಾನು ಇವತ್ತು ನಿಮ್ಮಲ್ಲಿ ಉಳಿದುಕೊಳ್ಳುವುದಿಲ್ಲ. = I don’t stay with you tonight.
- ನಾವು ಇವತ್ತು ಸಿನಿಮಾಕ್ಕೆ ಹೋಗುವುದಿಲ್ಲ. = We don’t go to film today.
- ನಾನು ಅವನ ಜೊತೆ ಮಾತನಾಡುವುದಿಲ್ಲ. = I don’t talk to him.
- ನನ್ನ ಹತ್ತಿರ ಅಷ್ಟೊಂದು ಹಣವಿಲ್ಲ. = I don’t have so much money.
- ಅವರು ನಮ್ಮೊಡನೆ ಸೇರಿಕೊಳ್ಳುವುದಿಲ್ಲ. = They don’t join us.
for* = ಸಮಯ/ಕಾಲವನ್ನು ಹೇಳುವಾಗ ಯಾವಾಗಲೂ for ನ್ನು ಬಳಸಬೇಕು. ಉದಾಹರಣೆಗೆ,
- 10 ನಿಮಿಷದ ಕಾಲ = for 10 minutes.
- ಒಂದು ಘಂಟೆಯ ಕಾಲ = for an hour.
- ಮೂರು ತಿಂಗಳ ಕಾಲ = for three months.
(ಮುಂದುವರೆಯುವುದು)