#19-Do-Part-4
ಪ್ರಿಯರೆ,
ಇಷ್ಟರವರೆಗೆ ಸಹಾಯಕ ಕ್ರಿಯಾಪದವಾದ ಗೆ ಸೇರಿಸಿ ನಕಾರಾತ್ಮಕ ವಾಕ್ಯಗಳನ್ನು ರಚಿಸಲು ಕಲಿತಿರಿ. ಈ ನಕಾರಾತ್ಮಕ ವಾಕ್ಯಗಳನ್ನು ಪ್ರಶ್ನಾಸೂಚಕವಾಗಿಸಲು ಏನು ಮಾಡಬೇಕೆಂದು ನೋಡೋಣ.
ಅವರು ಹೋಗುವುದಿಲ್ಲ. = They do not go.
ಇದನ್ನು ‘ನಾನು ಹೋಗುವುದಿಲ್ಲವೆ?’ ಎಂಬ ಪ್ರಶ್ನೆಯಾಗಿಸಲು ಈ ವಾಕ್ಯದಲ್ಲಿನ ಸಹಾಯಕ ಕ್ರಿಯಾಪದ do ವನ್ನು ಮೊದಲಿಗೆ ಹೇಳಿ, ನಂತರ ಕರ್ತೃಪದ + not + ಉಳಿದ ಪದಗಳನ್ನು ಸೇರಿಸಬೇಕು.
= Do they not go?
ಒಂದು ಪ್ರಶ್ನಾವಾಕ್ಯದ ಆರಂಭದಲ್ಲಿ ಕೇವಲ ಪ್ರಶ್ನಾರ್ಥಕ/ಸಹಾಯಕ ಕ್ರಿಯಾಪದಕ್ಕೆ ಮಾತ್ರ ಅವಕಾಶ. do not = ..ವುದಿಲ್ಲ’ ಎಂದಾದರೂ ಕೂಡ not ಸಹಾಯಕ ಕ್ರಿಯಾಪದವಲ್ಲ. ಕೇವಲ ನಕಾರ. ಆದ್ದರಿಂದ ಸಹಾಯಕ ಕ್ರಿಯಾಪದ do ಗೆ not ನ್ನು ಕತ್ತರಿಸಿ n’t ಎಂದಾಗಿಸಿ ಸೇರಿಸಿ. = don’t. ಈಗ ಆರಂಭದಲ್ಲಿ ಒಂದೇ ಶಬ್ದವಾಗಿ ಸಹಾಯಕ ಕ್ರಿಯಾಪದವೇ ಕಾಣಸಿಗುತ್ತದೆ. ಉಳಿದ ಪದಗಳನ್ನು ಹಾಗೆಯೇ ಸೇರಿಸಿ.
= Don’t they go? = ಅವರು ಹೋಗುವುದಿಲ್ಲವೆ?
ಕೆಳಗಿನ ಉದಾಹರಣೆಗಳನ್ನು ಅಭ್ಯಸಿಸಿ.
1. ನಾನು ಚೆನ್ನಾಗಿ ಹಾಡುವುದಿಲ್ಲವೆ? = Don’t I sing well?
2. ಅವರು ನಿನ್ನೊಡನೆ ಮಾತಾಡುವುದಿಲ್ಲವೆ? = Don’t they talk to you?
3. ನಾವು ಅವರಿಗೆ ಸಂಬಳ ಕೊಡುವುದಿಲ್ವಾ? = Don’t we give them salary?
4. ಅವರಿಗೆ ಇಂಗಿeಂμi ಗೊತ್ತಿಲ್ಲವೆ? = Don’t they know English?
5. ದೀಪಗಳು ಉರಿಯುವುದಿಲ್ಲವೆ? = Don’t the lamps burn*?
6. ಅವರಿಗೆ ಅವರ ಸಂಬಳ ಬೇಡವೆ? = Don’t they want their salary?
7. ಅವರು ನಮ್ಮ ಮನೆಗೆ ಬರಲು ಬಯಸುವುದಿಲ್ವಾ? = Don’t they want to come to our house?
8. ಅವರಿಗೆ ನಿಮ್ಮ ಕುಟುಂಬದ ಬಗ್ಗೆ ಗೊತ್ತಿಲ್ಲವೆ? = Don’t they know about your family?
9. ಅವರ ಹತ್ತಿರ ಹಣವಿಲ್ಲವೆ? = Don’t they have money?
10.ನಿನ್ನ ಗೆಳೆಯರು ನಿನಗಾಗಿ ಕಾಯುವುದಿಲ್ಲವೆ? = Don’t your friends wait for you?
(ಮುಂದುವರೆಯುವುದು)