#21 Do Part-6
ಪ್ರಿಯರೆ,
You + verb = ನೀನು + (ಕ್ರಿಯೆ)ಮಾಡು. ಎಂದು ನೀವು ತಿಳಿದಿದ್ದೀರಿ. ಈಗ ಮಾಡಬೇಡ/ಬೇಡಿ ಎಂಬ ನಕಾರಾತ್ಮಕ ಆದೇಶವಾಕ್ಯಗಳಿಗಾಗಿ do not ಅಥವಾ don’t ನ್ನು ಕ್ರಿಯಾಪದದ ಮೊದಲಿಗೆ ಸೇರಿಸಬೇಕು.
> You do not + verb. = ನೀನು/ನೀವು .. (ಕ್ರಿಯೆ) ಬೇಡ/ಬೇಡಿ
ಉದಾಹರಣೆಗಳನ್ನು ಗಮನಿಸಿ.
1. You do not go. = ನೀನು ಹೋಗಬೇಡ / ನೀವು ಹೋಗಬೇಡಿ.
2. You do not speak. = ನೀನು ಮಾತನಾಡಬೇಡ / ನೀವು ಮಾತನಾಡಬೇಡಿ.
3. You do not sit here. = ನೀನಿಲ್ಲಿ ಕುಳಿತುಕೊಳ್ಳಬೇಡ / ನೀವಿಲ್ಲಿ ಕುಳಿತುಕೊಳ್ಳಬೇಡಿ.
ಸಕಾರಾತ್ಮಕ ಆದೇಶವಾಕ್ಯಗಳಲ್ಲಿ You ವನ್ನು ಬಿಟ್ಟು ಉಳಿದ ಪದಗಳನ್ನು ಮಾತ್ರ ಹೇಳಿದಂತೆ (Go there/Come here) ನಕಾರಾತ್ಮಕ ವಾಕ್ಯಗಳನ್ನೂ ಹೇಳಬಹುದು. ಉದಾ:
You do not go. > Do not go. / Don’t go.
You do not speak. > Do not speak. / Don’t speak.
do not ನೊಡನೆ ಹೆಚ್ಚಿನ ಎಲ್ಲಾ ಕ್ರಿಯಾಪದಗಳಿಗೆ ಬೇಡ/ಬೇಡಿ ಪ್ರತ್ಯಯಗಳು ಸೇರಿಕೊಂಡರೂ, have, know, want ಗಳು ಬಳಕೆಯಾದಾಗ ತಿಳಿಯದು, ಗೊತ್ತಿಲ್ಲ, ಬೇಡ, ಇಲ್ಲ- ಇತ್ಯಾದಿ ಪ್ರತ್ಯಯಗಳು ಸೇರುತ್ತವೆ. ಉದಾ:
1. You don’t know my name. = ನಿನಗೆ ನನ್ನ ಹೆಸರು ಗೊತ್ತಿಲ್ಲ.
2. You don’t have money. = ನಿನ್ನ ಹತ್ತಿರ ಹಣವಿಲ್ಲ.
3. You do not like it. = ನೀನು ಅದನ್ನು ಇಷ್ಟಪಡುವುದಿಲ್ಲ/ನಿನಗದು ಇಷ್ಟವಾಗುವುದಿಲ್ಲ.
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ನೀನು ನಿನ್ನ ಪುಸ್ತಕವನ್ನು ಇಲ್ಲಿಡಬೇಡ. = Don’t keep your book here.
2. ನಿನ್ನ ಮುಖ ನನಗೆ ತೋರಿಸಬೇಡ. = Don’t show your face to me.
3. ನನ್ನ ಪುಸ್ತಕವನ್ನು ತೆಗೆದುಕೊಳ್ಳಬೇಡ. = Don’t take my book.
4. ದೀಪ ಆರಿಸಬೇಡಿ. = Don’t switch off* the light.
5. ದಯವಿಟ್ಟು ರಾತ್ರಿ ಮನೆಗೆ ಬರಬೇಡಿ. = Please don’t come to house at night.
6. 9ರ ನಂತರ ನನಗೆ ಕರೆಮಾಡಬೇಡಿ. = Don’t call me after 9’O’clock.
7. ಅವನಿಗೆ ನನ್ನ ವಿಳಾಸ ಕೊಡಬೇಡಿ. = Don’t give him my address.
8. ನನ್ನ ಜೊತೆ ತಮಿಳಿನಲ್ಲಿ ಮಾತನಾಡಬೇಡಿ. = Don’t speak to me in Tamil.
9. ಅವಳ ಬಗ್ಗೆ ನನ್ನ ಹತ್ತಿರ ಕೇಳಬೇಡ. = Don’t ask me about her.
10. ಅವನನ್ನು ಆಡಲು ಕರೆದುಕೊಂಡುಹೋಗಬೇಡ. = Don’t take him to play.
switch off*= ದೀಪ/ಫ್ಯಾನ್ಗಳನ್ನು ಆರಿಸುವುದಕ್ಕೆ switch off/ put off ಎಂದೂ, ‘on’ ಮಾಡುವುದಕ್ಕೆ switch on/ put on ಎಂದೂ ಹೇಳಲಾಗುತ್ತದೆ. ಉದಾ:
ಫ್ಯಾನ್ ಚಲಾಯಿಸು.. = Switch on the fan.
ಫ್ಯಾನ್ ನಿಲ್ಲಿಸು.. = Swithch off the fan.
(to be continued)
Tag:Do Part-6