
09 – HELPING VERBS – ಸಹಾಯಕ ಕ್ರಿಯಾಪದಗಳು
ಮಿತ್ರರೆ,
ಸಹಾಯಕ ಕ್ರಿಯಾಪದಗಳು ಯಾವುದೇ ಕ್ರಿಯೆಯನ್ನು ಪ್ರತಿನಿಧಿಸುವುದಿಲ್ಲ. ಆದರೆ ಇವುಗಳಿಲ್ಲದೆ ಇಂಗ್ಲೀಷ್ ವಾಕ್ಯರಚನೆ ಸಾಧ್ಯವೇ ಇಲ್ಲ. ಕನ್ನಡ ವಾಕ್ಯಗಳ ಕೊನೆಯ ಪದದ ಕೊನೆಯ ಪ್ರತ್ಯಯವನ್ನು ಇಂಗ್ಲಿಷ್ನ ಸಹಾಯಕ ಕ್ರಿಯಾಪದಗಳು ಪ್ರತಿನಿಧಿಸುತ್ತವೆ.
ಉದಾ:
1. He must come. = ಅವನು ಬರಲೇಬೇಕು.
2. He does come. = ಅವನು ಬರುತ್ತಾನೆ.
3. He can come. = ಅವನು ಬರಬಲ್ಲನು.
4. He has come. = ಅವನು ಬಂದಿದ್ದಾನೆ.
5. He may come. = ಅವನು ಬರಬಹುದು.
ಮೇಲಿನ ಎಲ್ಲಾ ವಾಕ್ಯಗಳಲ್ಲಿ ಕರ್ತೃಪದ ಮತ್ತು ಕ್ರಿಯಾಪದ ಒಂದೇ ಆಗಿದ್ದರೂ ಸಹಾಯಕ ಕ್ರಿಯಾಪದ ಬದಲಾದಂತೆ ಕೊನೆಯಪದದ ಕೊನೆಯ ಪ್ರತ್ಯಯ ಬದಲಾಗಿದೆ. ಇದರಿಂದ ವಾಕ್ಯಗಳ ಮೂಲ ಅರ್ಥವೇ ಬದಲಾಗಿದೆ. ಹೀಗೆ ಸಹಾಯಕ ಕ್ರಿಯಾಪದಗಳು ಒಂದು ವಾಕ್ಯದ ಭಾವಾರ್ಥವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದುದರಿಂದ ನೀವು ಎಲ್ಲಾ ಸಹಾಯಕ ಕ್ರಿಯಾಪದಗಳ ಅರ್ಥ, ಅವುಗಳ ನಂತರ ಬಳಸಬಹುದಾದ ಕ್ರಿಯಾಪದದ ನಮೂನೆಯನ್ನು ತಿಳಿದುಕೊಂಡರೆ ಅವುಗಳನ್ನು ಉಪಯೋಗಿಸಿ ನಿಮಗೆ ಬೇಕಾದಲ್ಲಿ, ಬೇಕಾದಂತೆ ವಾಕ್ಯ ರಚಿಸಿ ಮಾತನಾಡಬಹುದು.
ಅಗತ್ಯವಾಗಿ ನೀವು ತಿಳಿದಿರಬೇಕಾದ ಕೆಲವು ವಿಷಯಗಳು
ಇಂಗ್ಲೀಷ್ ಭಾಷೆಯ ಮೂಲತತ್ತ್ವಗಳಲ್ಲದೆ, ನೀವು ಮನನ ಮಾಡಿಕೊಳ್ಳಬೇಕಾದ ಮುಖ್ಯವಾದ ಕೆಲವು ವಿಷಯಗಳೆಂದರೆ:
1. You ಶಬ್ದಕ್ಕೆ ನೀನು ಮತ್ತು ನೀವು ಎಂಬ ಎರಡು ಅರ್ಥಗಳಿವೆ. ಆದ್ದರಿಂದ ಹಿರಿಯರೊಡನೆ ಮಾತನಾಡುವಾಗ ನೀವು ಎಂದು ಗೌರವ ಸೂಚಿಸಲು ಬೇರೆ ಯಾವುದೇ ಪದಗಳನ್ನು ಬಳಸುವ ಅಗತ್ಯವಿಲ್ಲ.
2. He/She ಶಬ್ದಗಳ ಅರ್ಥ ಅವನು/ಅವಳು ಎಂದಿದ್ದರೂ ಕೂಡಾ, ಒಬ್ಬ ವ್ಯಕ್ತಿ ಚಿಕ್ಕವನಿ(ಳಿ)ರಲಿ, ದೊಡ್ಡವನಿ(ಳಿ)ರಲಿ, ಅರಸ ಅಥವಾ ಆಳು ಯಾರೇ ಆಗಿರಲಿ, ಆ ವ್ಯಕ್ತಿ ಗಂಡಸಾಗಿದ್ದರೆ He ಎಂದೂ ಹೆಂಗಸಾಗಿದ್ದರೆ She ಎಂದೂ ಸಂಭೋದಿಸಬೇಕು. ಕನ್ನಡದಲ್ಲಿ ಗೌರವಸೂಚಕವಾಗಿ ‘ಅವರು’ ಎಂದು ಹೇಳುತ್ತೇವಾದರೂ, ಇಂಗ್ಲಿಷ್ನಲ್ಲಿ ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿಯ ಲಿಂಗದ ಅನುಸಾರ he/she ಎಂದೇ ಸಂಭೋದಿಸಬೇಕು. ಹಾಗೆ ಕರೆದರೂ ನೀವು ಅವರಿಗೆ ಗೌರವ ಸೂಚಿಸಿದ್ದೀರೆಂದೇ ಅರ್ಥ.
3. They ಶಬ್ದಕ್ಕೆ ಅವರು/ಇವರು/ಅವುಗಳು/ಇವುಗಳು ಎಂದರ್ಥವಿರುವುದರಿಂದ, ಇದನ್ನು ಒಬ್ಬ ವ್ಯಕ್ತಿಯ ಬಗ್ಗೆ ಹೇಳುವಾಗ ಬಳಸಬಾರದು. ಒಬ್ಬರಿಗಿಂತ ಅಥವಾ ಒಂದಕ್ಕಿಂತ ಹೆಚ್ಚು ಜನ/ವಸ್ತುಗಳಿದ್ದಾಗ ಮಾತ್ರ ಉಪಯೋಗಿಸಬೇಕು.
4. ಪುರುಷರಿಗೆ ಗೌರವ ಸೂಚಿಸಲು ಶ್ರೀಯುತ, ಹಾಗೂ ವಿವಾಹಿತ ಸ್ತ್ರೀಯರಿಗೆ ಶ್ರೀಮತಿ ಎಂದು ಕರೆದಂತೆ ಇಂಗ್ಲೀಷ್ನಲ್ಲಿ ಶ್ರೀಯುತ ಎನ್ನಲು Mister (ಮಿಸ್ಟರ್), ಶ್ರೀಮತಿ ಎನ್ನಲು Mistress (ಮಿಸೆಸ್), ಯುವತಿಯರಿಗೆ Miss (ಮಿಸ್), ಮಹನೀಯ ಎನ್ನಲು Gentleman/Sir (ಜಂಟಲ್ಮನ್/ಸರ್), ಮಹಿಳೆ ಎನ್ನಲು Lady (ಲೇಡಿ) ಎಂದೂ ಕರೆಯಲಾಗುತ್ತದೆ.
5. ದಿನಗಳನ್ನು ಹೀಗೆ ಹೇಳಲಾಗುತ್ತದೆ:
ಮೊನ್ನೆ/ಮೊನ್ನೆ ರಾತ್ರಿ = day before/ night before
ನಿನ್ನೆ / ನಿನ್ನೆ ರಾತ್ರಿ = yesterday / last night
ಇಂದು / ಇಂದು ರಾತ್ರಿ = today / tonight
ನಾಳೆ / ನಾಳೆ ರಾತ್ರಿ = tomorrow / tomorrow night
ನಾಳಿದ್ದು / ನಾಳಿದ್ದು ರಾತ್ರಿ = day after / night after
ಇಂದು ಬೆಳಿಗ್ಗೆ = this morning
ಇಂದು ಮಧ್ಯಾಹ್ನ = this afternoon
ಇಂದು ಸಂಜೆ = this evening
(to be continued…)
Tag:HELPING VERBS
1 Comment
English ಭಾಷೆಯನ್ನು ಸುಲಭವಾಗಿ ಅರಿಕೊಳ್ಳಲು ತಾವು ನಡೆಸುತ್ತಿರುವ ಈ ಪ್ರಯತ್ನಕ್ಕೆ ಹಾಗೂ ತಮ್ಮ ವೃತ್ತಿಗೆ ಹೃದಯಪೂರ್ವಕ ವಂದನೆಗಳು
ತಮ್ಮ ವೃತ್ತಿ ಸದಾ ಕಾಲವೂ ಹೀಗೆ ಕ್ರಿಯಾಶೀಲವಾಗಿರಲಿ