15 – Imperatives Part 3
ಪ್ರಿಯರೆ,
ಇಷ್ಟರವರೆಗೆ ನಮ್ಮೆದುರಿಗಿನ ವ್ಯಕ್ತಿಗೆ ಒಂದು ಕ್ರಿಯೆ ಇರುವ ಆದೇಶಗಳನ್ನು ಇಂಗ್ಲೀಷ್ನಲ್ಲಿ ಹೇಗೆ ಹೇಳುವುದೆಂದು ತಿಳಿದಿರಿ, ಕೆಲವೊಮ್ಮೆ 2 ಅಥವಾ ಅದಕ್ಕಿಂತ ಹೆಚ್ಚು ಕ್ರಿಯೆಗಳಿರುವ ವಾಕ್ಯಗಳನ್ನು ಹೇಳುತ್ತೇವೆ. ಉದಾ:
1. ಅಲ್ಲಿಗೆ ಹೋಗಿ ಬಾ.
ಈ ವಾಕ್ಯದಲ್ಲಿ 2 ಕ್ರಿಯೆಗಳಿವೆ, ಅವುಗಳು: ಹೋಗು, ಬಾ. ಈ ವಾಕ್ಯವನ್ನು ಮೊದಲಿಗೆ ಒಂದೊಂದು ಕ್ರಿಯೆಗೆ ಒಂದೊಂದು ವಾಕ್ಯದಂತೆ 2 ವಾಕ್ಯಗಳನ್ನಾಗಿಸಿಕೊಳ್ಳಿ. =
1. ನೀನು (ಮರೆಯಾಗಿರುವ ಕರ್ತೃಪದ) ಅಲ್ಲಿಗೆ ಹೋಗು.
2. (ನೀನು) ಬಾ.
ಈಗ ಅನುವಾದಿಸಿ. = 1. You go there 2. You come.
ಈಗ ಈ ವಾಕ್ಯಗಳಲ್ಲಿ ಪುನರಾವರ್ತಿತವಾದ ಶಬ್ದಗಳನ್ನು ಹೊಡೆದುಹಾಕಿ ಅದರ ಬದಲಿಗೆ and ಸೇರಿಸಿ ಹೇಳಿ.
You go there + You come = You go there and come.
2. ಕಾಲು ತೊಳೆದು ಒಳಗೆ ಬನ್ನಿ. ಈ ವಾಕ್ಯವನ್ನೂ ಹಿಂದಿನವಾಕ್ಯದಂತೆಯೇ 2 ವಾಕ್ಯಗಳಾಗಿ ವಿಂಗಡಿಸಿಕೊಂಡು ಅನುವಾದಿಸಿ.
= 1. ನೀವು ಕಾಲು ತೊಳೆಯಿರಿ 2. ನೀವು ಒಳಗೆ ಬನ್ನಿ. = You wash your legs + You come in =
ಇವುಗಳನ್ನು ಹಿಂದಿನ ವಾಕ್ಯದಂತೆಯೇ and ನಿಂದ ಸೇರಿಸಿ. = (You) Wash your legs and come in.
ಕೆಳಗಿನ ಉದಾಹರಣೆಗಳನ್ನು ಅಭ್ಯಸಿಸಿ.
1. ಕೈ ತೊಳೆದು ಊಟ ಮಾಡು. = Wash your hands and take meals.
2. ಸ್ನಾನ ಮಾಡಿ ತಿಂಡಿ ತಿನ್ನು. = Take bath and have breakfast.
3. ಅವನನ್ನು ಕರೆದು ಬಾ. = Call him and come.
ಗಮನಿಸಿ, ಮೇಲಿನಂತಹ ಆದೇಶ ವಾಕ್ಯಗಳಲ್ಲಿ 2ಕ್ಕಿಂತ ಹೆಚ್ಚು ಕ್ರಿಯಾಪದಗಳಿದ್ದರೆ ಅದನ್ನು ಅಷ್ಟೂ ವಾಕ್ಯಗಳಾಗಿ ಬಿಡಿಸಿಕೊಂಡು, ಮೊದಲಿನ ಎಲ್ಲಾ ವಾಕ್ಯಗಳನ್ನು comma ದಿಂದ ಹಾಗೂ ಕೊನೆಯ ಎರಡು ವಾಕ್ಯಗಳನ್ನು ಮಾತ್ರ and ನಿಂದ ಸೇರಿಸಬೇಕು. ಉದಾಹರಣೆಗಳನ್ನು ಅಭ್ಯಸಿಸಿ.
1. ಅಲ್ಲಿಗೆ ಹೋಗಿ ಅವನನ್ನು ಕರೆದು ಬಾ.
Go there, call him and come back.
2. ರಾಜುವಿನ ಮನೆಗೆ ಹೋಗಿ ಅವನಿಗೆ ಇದನ್ನು ಕೊಟ್ಟು ಬಾ.
Go to Raju’s house, give this to him and come back.
3. ಇವನÀನ್ನು ಅಂಗಡಿಗೆ ಕರೆದೊಯ್ದು ಇವನಿಗೆ ಚಾಕಲೇಟ್ ಕೊಡಿಸಿ ಹಿಂದೆ ಕರೆದುಕೊಂಡುಬಾ.
Take him to shop, get him chocolates and bring him back.
4. ಬ್ಯಾಂಕಿಗೆ ಹೋಗಿ ಈ ಹಣವನ್ನು ಕಟ್ಟಿ ಒಂದು ಡಿಡಿ ತೆಗೆದುಕೊಂಡು ಬಾ.
Go to bank, remit this money and bring a draft.
5. ನೆಲವನ್ನು ಗುಡಿಸಿ, ಒರೆಸಿ, ಬಟ್ಟೆ ಒಗೆದು, ಪಾತ್ರೆ ತೊಳೆದು, ಕಾಫಿ ಕುಡಿದು ಹೋಗು.
Sweep the floor, mop the floor, wash the clothes, wash the vessels, drink coffee and go.
> Sweep and mop the floor*, wash* the clothes and vessels, drink coffee and go.
** ಗುಡಿಸುವುದು ಹಾಗೂ ಒರೆಸುವುದು ಒಂದೇ ವಸ್ತು = ನೆಲವನ್ನೇ ಆದುದರಿಂದ ಎರಡೂ ಕ್ರಿಯೆಗಳನ್ನು and ನಿಂದ ಸೇರಿಸಲಾಗಿದೆ, ಇದೇ ರೀತಿ ಬಟ್ಟೆ ಹಾಗೂ ಪಾತ್ರೆಗಳನ್ನು ‘ತೊಳೆಯು’ವ ಕ್ರಿಯೆಯೇ ನಡೆಯುವುದರಿಂದ ಅವೆರಡನ್ನೂ wash ನ ನಂತರ and ನಿಂದ ಸೇರಿಸಿ ಹೇಳಲಾಗಿದೆ. ಈ ರೀತಿಯ ಬಳಕೆಯನ್ನು ನಿಮ್ಮದೇ ಆದ ವಾಕ್ಯಗಳನ್ನು ರಚಿಸಿ ಅನುವಾದಿಸಿ ಅಭ್ಯಸಿಸಿ.
2 Comments
Nice
Thank You :)